Saturday, May 30, 2026
HomeCrime‘ಆಪರೇಷನ್ ರೇಜ್‌ಪಿಲ್’; 182 ಕೋಟಿ ರೂ ಮೌಲ್ಯದ ‘ಜಿಹಾದಿ ಡ್ರಗ್’ ವಶ

‘ಆಪರೇಷನ್ ರೇಜ್‌ಪಿಲ್’; 182 ಕೋಟಿ ರೂ ಮೌಲ್ಯದ ‘ಜಿಹಾದಿ ಡ್ರಗ್’ ವಶ

ನವದೆಹಲಿ: ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ನಡೆಸಿದ ‘ಆಪರೇಷನ್ ರೇಜ್‌ಪಿಲ್’ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ 182 ಕೋಟಿ ರೂ ಮೌಲ್ಯದ ‘ಕ್ಯಾಪ್ಟಗನ್’ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ Amit Shah ತಿಳಿಸಿದ್ದಾರೆ.

ಮುಂದ್ರಾ ಬಂದರು ಹಾಗೂ ದೆಹಲಿಯ ನೆಬ್ ಸರಾಯ್ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 200 ಕೆಜಿ ಕ್ಯಾಪ್ಟಗನ್ ವಶಕ್ಕೆ ಪಡೆಯಲಾಗಿದೆ. ಈ ಮಾದಕ ವಸ್ತುವನ್ನು ಸಿರಿಯಾದಿಂದ ಭಾರತಕ್ಕೆ ತಂದು, ಬಳಿಕ ಸೌದಿ ಅರೇಬಿಯಾಗೆ ಸಾಗಿಸಲು ಯತ್ನಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಿರಿಯನ್ ಪ್ರಜೆಯನ್ನು ಬಂಧಿಸಲಾಗಿದ್ದು, ಆತ ಚಹಾ ಎಲೆಗಳ ಪೆಟ್ಟಿಗೆಯೊಳಗೆ ಡ್ರಗ್ಸ್ ಮರೆಮಾಡಿ ಸಾಗಾಟ ನಡೆಸುತ್ತಿದ್ದ ಎನ್ನಲಾಗಿದೆ. ದೆಹಲಿಯಿಂದ ಪಶ್ಚಿಮ ಏಷ್ಯಾಕ್ಕೆ ಮಾದಕ ವಸ್ತು ಜಾಲವನ್ನು ನಿರ್ವಹಿಸುತ್ತಿದ್ದ ಆರೋಪಿಯ ಭಯೋತ್ಪಾದನಾ ಸಂಪರ್ಕಗಳ ಬಗ್ಗೆ ತನಿಖೆ ಮುಂದುವರಿದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅಮಿತ್ ಶಾ, “ಆಪರೇಷನ್ ರೇಜ್‌ಪಿಲ್ ಮೂಲಕ 182 ಕೋಟಿ ರೂ ಮೌಲ್ಯದ ಜಿಹಾದಿ ಡ್ರಗ್ ಕ್ಯಾಪ್ಟಗನ್ ವಶಪಡಿಸಿಕೊಳ್ಳಲಾಗಿದೆ. ಮಧ್ಯಪ್ರಾಚ್ಯಕ್ಕೆ ಸಾಗಿಸುತ್ತಿದ್ದ ಈ ಜಾಲವನ್ನು ಭೇದಿಸಿರುವುದು ಭಾರತದ ಮಾದಕವಸ್ತು ವಿರೋಧಿ ಶೂನ್ಯ ಸಹಿಷ್ಣುತೆ ನೀತಿಗೆ ಸಾಕ್ಷಿ” ಎಂದು ಹೇಳಿದ್ದಾರೆ.

ಕ್ಯಾಪ್ಟಗನ್ ಒಂದು ಅತ್ಯಂತ ವ್ಯಸನಕಾರಿ ಸಿಂಥೆಟಿಕ್ ಆಂಫೆಟಮೈನ್ ಮಾದರಿಯ ಉತ್ತೇಜಕ ಡ್ರಗ್ ಆಗಿದ್ದು, ಐಸಿಸ್‌ನಂತಹ ಉಗ್ರಗಾಮಿ ಸಂಘಟನೆಗಳು ದಾಳಿಗಳ ವೇಳೆ ಭಯ ಕಡಿಮೆ ಮಾಡಿಕೊಂಡು ಶಕ್ತಿ ಹೆಚ್ಚಿಸಿಕೊಳ್ಳಲು ಬಳಸುತ್ತವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದನ್ನು ʻಜಿಹಾದಿ ಡ್ರಗ್ʼ ಎಂದು ಕರೆಯಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share