Saturday, May 30, 2026
HomeStateಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು!

ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು!

ಡಾ. ನಾ ಡಿಸೋಜಾ 89ನೇ ಜನ್ಮದಿನೋತ್ಸವ ಅಂಗವಾಗಿ ರಾಜ್ಯಮಟ್ಟದ ಕಥೆ ಹೇಳುವ ವಿಡಿಯೋ ಸ್ಪರ್ಧೆ

ಬೆಂಗಳೂರು: ಮಕ್ಕಳಲ್ಲಿ ಕಥೆ ಹೇಳುವ ಕೌಶಲ್ಯ, ಕನ್ನಡ ಸಾಹಿತ್ಯದ ಆಸಕ್ತಿ ಹಾಗೂ ಭಾಷಾ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಡಾ. ನಾ ಡಿಸೋಜಾ ಅವರ 89ನೇ ಜನ್ಮದಿನೋತ್ಸವದ ಅಂಗವಾಗಿ ರಾಜ್ಯಮಟ್ಟದ ವಿಡಿಯೋ ಮುಖಾಂತರ ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗಿದೆ.

“ಒಂದು ಕಥೆ – ಒಂದು ಪ್ರೇರಣೆ” ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಮಕ್ಕಳು 7ನೇ ತರಗತಿಯ ಸಿರಿ ಕನ್ನಡ ಪಠ್ಯಪುಸ್ತಕದ ಮೊದಲನೆಯ ಪಾಠ “ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು” ಕಥೆಯನ್ನು ಆಧರಿಸಿ ಕನ್ನಡದಲ್ಲಿಯೇ ಕಥೆ ಹೇಳಬೇಕಿದೆ.

ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ಎ ವಿಭಾಗದಲ್ಲಿ 1ರಿಂದ 4ನೇ ತರಗತಿ ಹಾಗೂ ಬಿ ವಿಭಾಗದಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.

ವಿಡಿಯೋ ಕಥೆ ಹೇಳುವ ಅವಧಿ 5ರಿಂದ 10 ನಿಮಿಷಗಳೊಳಗಿರಬೇಕು. ಮಗುವಿನ ಮುಖ ಸ್ಪಷ್ಟವಾಗಿ ಕಾಣಬೇಕು. ದನಿ, ಭಾವ, ಭಂಗಿ ಹಾಗೂ ನಿರೂಪಣೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ವೇಷಭೂಷಣ ಅಥವಾ ಸರಳ ಉಪಕರಣಗಳನ್ನು ಬಳಸಬಹುದಾಗಿದೆ. ವಿಡಿಯೋ MP4 ಫಾರ್ಮ್ಯಾಟ್‌ನಲ್ಲಿ ಇದ್ದರೆ ಉತ್ತಮ ಎಂದು ಆಯೋಜಕರು ತಿಳಿಸಿದ್ದಾರೆ.

ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ತರಗತಿ, ವಯಸ್ಸು ಹಾಗೂ ಪೋಷಕರ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಕಥೆ ಹೇಳುವ ವಿಡಿಯೋವನ್ನು ಮೇ 30, 2026ರೊಳಗೆ ವಾಟ್ಸಾಪ್ ಸಂಖ್ಯೆ 98452 66114ಕ್ಕೆ ಕಳುಹಿಸಬಹುದಾಗಿದೆ. ಫಲಿತಾಂಶವನ್ನು ಜೂನ್ 6, 2026ರಂದು ಪ್ರಕಟಿಸಲಾಗುತ್ತದೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ಪ್ರಮಾಣಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 98452 66114 ಸಂಖ್ಯೆಯನ್ನು ಸಂಪರ್ಕಿಸಬಹುದು. ಇ-ಮೇಲ್: nadi.spoortidhare@gmail.com

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share