ಯಲ್ಲಾಪುರ: ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಶಿವರಾಮ ಹೆಬ್ಬಾರ್ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಜನ್ಮದಿನವನ್ನು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಜನ್ಮದಿನದ ಅಂಗವಾಗಿ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಶಿವರಾಮ ಹೆಬ್ಬಾರ್ ಅವರ ಆರೋಗ್ಯ, ಆಯುರಾರೋಗ್ಯ ಹಾಗೂ ಜನಸೇವೆಗೆ ಶುಭ ಹಾರೈಸಲಾಯಿತು.
ಬಳಿಕ ಕೆಪಿಸಿಸಿ ಮಾಜಿ ಸದಸ್ಯ ವಿಜಯ ಮಿರಾಶಿ ಹಾಗೂ ವಿಕಾಸ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಅವರ ನೇತೃತ್ವದಲ್ಲಿ ನಾಯಕನಕೆರೆ ಸಮೀಪದ ವೃದ್ಧಾಶ್ರಮದಲ್ಲಿ ಜನ್ಮದಿನ ಆಚರಣೆ ನಡೆಸಿ, ವೃದ್ಧಾಶ್ರಮದ ನಿವಾಸಿಗಳೊಂದಿಗೆ ಸಂಭ್ರಮ ಹಂಚಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎನ್.ಕೆ. ಭಟ್, ಪ್ರೇಮಾನಂದ ನಾಯ್ಕ, ಉಲ್ಲಾಸ ಶಾನಭಾಗ, ಸುಬ್ಬಣ್ಣ ಕುಂಟೆಗಾಳಿ, ಸುನಂದಾ ದಾಸ್, ಆರ್.ಎಸ್. ಭಟ್, ಎಂ.ಡಿ. ಮುಲ್ಲಾ, ಶಿರೀಶ್ ಪ್ರಭು, ಗಜಾನನ ಭಟ್, ಶಾಸಕರ ಆಪ್ತ ಸಹಾಯಕ ನಾಗರಾಜ ನಾಯ್ಕ, ನರ್ಮದಾ ನಾಯ್ಕ, ಸರಸ್ವತಿ ಗುನಗಾ, ಮುಸರತ್ ಖಾನ್, ಶಿವರಾಮ ಮಡಿವಾಳ, ಎಂ.ಕೆ. ಭಟ್, ನವೀನ್ ಹೆಗಡೆ, ಗಣೇಶ್ ಹೆಗಡೆ, ಅನಿಲ್ ಮರಾಠೆ, ಮಹೇಶ್ ನಾಯ್ಕ, ನಾಗರಾಜ ಕೈಟ್ಕರ್, ಫಕೀರಪ್ಪ ಹರಿಜನ, ಕೃಷ್ಣ ಬಿಳಕಿ, ದೀಪಕ್ ನಾಯ್ಕ, ಆನಂದ ರಾಯ್ ಗೊಳಸಂಗಿ, ಸುಜಾತಾ ಸಿದ್ದಿ, ಮನೋಜ್ ನಾಯ್ಕ, ಶಕೀಲ್ ಶೇಖ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.