ಅಂಕೋಲಾ: ತಾಲೂಕಿನ ಬೆಳಂಬರ ಗ್ರಾಮದ ಉತ್ತರ ಖಾರ್ವಿವಾಡದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಐವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 3ರಂದು ರಾತ್ರಿ 9 ಗಂಟೆ ಸುಮಾರಿಗೆ ಬೆಳಂಬರ ಉತ್ತರ ಖಾರ್ವಿವಾಡದ ಸಾರ್ವಜನಿಕ ಬಾವಿ ಸಮೀಪದ ರಸ್ತೆಯಲ್ಲಿ ಕೆಲವರು ಹಣ ಪಣಕ್ಕಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಸುಭಾಷ ವಿಷ್ಣು ಖಾರ್ವಿ (50), ರವಿ ತಿಮ್ಮಪ್ಪ ಗೌಡ (41), ಯೋಗೇಶ ಕುಸ್ಲು ಗೌಡ (35), ಸಂತೋಷ ಗಣಪತಿ ಖಾರ್ವಿ (39) ಹಾಗೂ ಹರ್ಷನ ಸುಧಾಕರ ಖಾರ್ವಿ (22) ಸೇರಿದಂತೆ ಇತರರು ಸಿಕ್ಕಿಬಿದ್ದಿದ್ದಾರೆ.
ಆರೋಪಿತರು ಇಸ್ಪೀಟ್ ಎಲೆಗಳ ಮೇಲೆ ₹200 ರಿಂದ ₹500ರವರೆಗೆ ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿದ್ದರು. ದಾಳಿ ವೇಳೆ ₹12,340 ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಗುರುನಾಥ ಹಾದಿಮನಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.