Friday, July 24, 2026
Join WhatsApp Group
HomeAgricultureಕೃಷಿ ಸಂಸ್ಕರಣಾ ಘಟಕ ಸ್ಥಾಪಿಸಬೇಕಾ? ಇಲ್ಲಿದೆ ಯೋಜನೆ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸಬೇಕಾ? ಇಲ್ಲಿದೆ ಯೋಜನೆ

ಕಾರವಾರ: ಪ್ರಸಕ್ತ ಸಾಲಿನ ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90ರ ರಿಯಾಯತಿಯಲ್ಲಿ ಕಬ್ಬಿನ ರಸ ತೆಗೆಯುವ ಯಂತ್ರ, ರೊಟ್ಟಿ ಮತ್ತು ಹಪ್ಪಳ ಮಾಡುವ ಯಂತ್ರ, ಶ್ಯಾವಿಗೆ ಯಂತ್ರ, ಹಿಟ್ಟಿನ ಗಿರಣಿಗಳು, ಖಾರ/ಮಸಾಲೆ ಕುಟ್ಟುವ ಯಂತ್ರಗಳು, ರವಾ ಯಂತ್ರ, ರೈಸ್ ಮಿಲ್, ಎಣ್ಣೆ ತೆಗೆಯುವ ಯಂತ್ರಗಳು, ಫ್ಲೋರ್‌ ಮಿಲ್ ಹಾಗೂ ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳನ್ನು ವಿತರಿಸಲಾಗುತ್ತಿದೆ.

ಆಸಕ್ತ ರೈತರು ಪಹಣಿ (ಆರ್.ಟಿ.ಸಿ), ಆಧಾರ್‌ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಝೇರಾಕ್ಸ, ಎರಡು ಭಾವಚಿತ್ರ, ರೂ.100ರ ಛಾಪಾ ಕಾಗದದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share