Friday, July 24, 2026
Join WhatsApp Group
HomeLocal Newsಬೇಡ್ತಿ-ಅಘನಾಶಿನಿ ಯೋಜನೆ ಜಾರಿಯಾಗದು!

ಬೇಡ್ತಿ-ಅಘನಾಶಿನಿ ಯೋಜನೆ ಜಾರಿಯಾಗದು!

ಶಿರಸಿ: ಉತ್ತರಕನ್ನಡ ಜಿಲ್ಲೆ ತ್ಯಾಗಮಯಿ ಜಿಲ್ಲೆಯಾಗಿದ್ದು, ಇಲ್ಲಿ ಮತ್ತೆಮತ್ತೆ ಪರಿಸರಕ್ಕೆ, ಜನ ಜೀವನಕ್ಕೆ ಧಕ್ಕೆ ತರುವ ಇಂತಹ ಯೋಜನೆಗಳನ್ನು ಜಾರಿಗೆ ತರಲು ಬಿಡುವದಿಲ್ಲ. ಆದ್ದರಿಂದ ಪ್ರಸ್ತಾಪಿತ ಬೇಡ್ತಿ-ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ತರಲು ಬಿಡುವದಿಲ್ಲ ಎಂದು ರಾಜ್ಯ ಸರಕಾರದ ಆಡಳಿತ ಸುಧಾರಣಾ ಸಮಿತಿ ಅದ್ಯಕ್ಷರು, ಮಾಜಿ ಮಂತ್ರಿಗಳಾದ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಶಿರಸಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅನಂತಹೆಗಡೆ ಆಶಿಸರ ಅವರ ನಿಯೋಗಕ್ಕೆ ತಮ್ಮ ಸ್ಪಷ್ಟ ಭರವಸೆಯನ್ನು ವ್ಯಕ್ತಪಡಿಸಿ, ಈ ಬಗ್ಗೆ ನಾನು ಈ ಹಿಂದೆಯೇ ಕೇಂದ್ರ ಬೇಡ್ತಿ-ಅಘನಾಶಿನಿ ನಿಯೋಗದಿಂದ ದೇಶಪಾಂಡೆ ಅವರ ಭೇಟಿ.

ಈ ಸಂದರ್ಭದಲ್ಲಿ ರಾಜ್ಯ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಉ.ಕ ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ರಾಜ್ಯದ ನೀರಾವರಿ ಸಚಿವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮದಲ್ಲಿ ಆರ್.ವಿ ದೇಶಪಾಂಡೆ ಅವರು ಪಾಲ್ಗೊಳ್ಳಬೇಕು ಎಂದು ಬೇಡ್ತಿ-ಅಘನಾಶಿನಿ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮನವಿ ಮಾಡಿದರು.

ಉ.ಕ ಜಿಲ್ಲೆ ಕಾಳಿ, ಶರಾವತಿ, ಸೀಬರ್ಡ್, ಕೈಗಾ ಸೇರಿದಂತೆ ಬೃಹತ್ ಯೋಜನೆಗಳ ಭಾರದಿಂದ ಧಾರಣ ಸಾಮರ್ಥ್ಯ ಕಳೆದುಕೊಂಡಿದೆ. ಇನ್ನು ಹೊಸ ಬೃಹತ್ ಯೋಜನೆಗಳ ಹೇರುವಿಕೆ ಬೇಡ. ಇದನ್ನು ರಾಜ್ಯ, ಕೇಂದ್ರ ಸರ್ಕಾರಗಳಿಗೆ ತಿಳಿಸಿ ಹೇಳಬೇಕು. ರಾಜ್ಯ ನೀರಾವರಿ ಸಚಿವರನ್ನು ಭೇಟಿ ಮಾಡೋಣ ಎಂದು ತಿಳಿಸಿದರು.

ಬೇಡ್ತಿ-ಅಘನಾಶಿನಿ ಯೋಜನೆಗಳ ಜಾರಿ ಆಗುವದೇ ಇಲ್ಲ. ಧೈರ್ಯದಿಂದ ಇರಿ ಎಂದು ಜಿಲ್ಲೆಯ ಜನತೆಗೆ ದೇಶಪಾಂಡೆ ಸಂದೇಶ ನೀಡಿದರಲ್ಲದೆ, ಪೂಜ್ಯ ಸ್ವರ್ಣವಲ್ಲೀ ಶ್ರೀಗಳ ದರ್ಶನವನ್ನು ಪಡೆಯುತ್ತೇನೆ ಎಂದರು.

ನಿಯೋಗದಲ್ಲಿ ಬೇಡ್ತಿ-ಅಘನಾಶಿನಿ ಸಮಿತಿಯ ಅನಂತ ಹೆಗಡೆ ಅಶೀಸರ, ನಾರಾಯಣ ಗಡಿಕೈ, ದೀಪಕ ದೊಡ್ಡೂರ, ಗಣಪತಿ.ಕೆ, ನಿತಿನ್ ಕಾಸರಕೋಡ, ಜಿ.ವಿ. ಹೆಗಡೆ, ಕದಂಬ ಸಿಇಓ ವಿಶ್ವೇಶ್ವರ ಕೋಟೆಮನೆ, ನಾಗರಾಜ ನಾರ್ವೆಕರ ಮುಂತಾದವರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share