ಯಲ್ಲಾಪುರ : ಇಬ್ಬರು ಅಮಲಾಸುರರ ಅರೆಸ್ಟ್!
ಯಲ್ಲಾಪುರ: ಸಾರ್ವಜನಿಕ ರಸ್ತೆಯ ಬಳಿ ನಿಂತು ಗಾಂ*ಜಾ ಸೇವನೆ ಮಾಡಿದ ಅಮಲಿನಲ್ಲಿದ್ದ ಆರೋಪದಡಿಯಲ್ಲಿ ಯಲ್ಲಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಜನತಾ ಕಾಲೋನಿ ನಿವಾಸಿ ಚಂದನ ಹನುಮಂತ ಹರಿಕoತ್ರ (22)ಹಾಗೂ ಯಲ್ಲಾಪುರ ತಾಲೂಕಿನ ಚವತಿ ನಿವಾಸಿ ಪ್ರಮೋದ ಅಶೋಕ ಶೇರುಗಾರ (29) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಫೆ.15ರಂದು ಯಲ್ಲಾಪುರ ಪಟ್ಟಣದ ವೈಟಿಎಸ್ಎಸ್ ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿದ ಅಮಲಿನಲ್ಲಿ ಇವರಿಬ್ಬರೂ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಗಳು ಗಾಂಜಾ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಇಬ್ಬರನ್ನೂ ಬಂಧಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.