ಕಾರವಾರ: ನಗರದ ಪಿಯು ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ–ಯುವತಿ ಇಬ್ಬರು ಕಾಲೇಜಿನಿಂದಲೇ ಕಾಣೆಯಾಗಿರುವ ಘಟನೆ ನಡೆದಿದೆ. ಜೂನ್ 24ರಂದು ಇಬ್ಬರೂ ಕಾಲೇಜಿನಿಂದ ನಾಪತ್ತೆಯಾಗಿದ್ದು, ಇದುವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆ ಸಾರ್ವಜನಿಕರ ಸಹಕಾರ ಕೋರಿದೆ.
ಕಾರವಾರದ ನಂದನಗದ್ದಾ–ಬಾಡದಲ್ಲಿರುವ ಪ್ರೀಮಿಯರ್ ಸೈನ್ಸ್ ಆ್ಯಂಡ್ ಕಾಮರ್ಸ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ಓದುತ್ತಿದ್ದ ಪೂನಮ್ ಜಿತೇಂದ್ರ ವೈಷ್ಣವ್ (16) ಹಾಗೂ ಸಾಗರ ಬಿಷನುಪದ ಪೋರಿಯಾ (17) ಕಾಣೆಯಾಗಿದ್ದಾರೆ.
ಪೂನಮ್ ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹಾಗೂ ಸುಮಾರು 5.6 ಅಡಿ ಎತ್ತರ ಹೊಂದಿದ್ದು, ಹಿಂದಿ, ರಾಜಸ್ಥಾನಿ, ಕೊಂಕಣಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಚೂಡಿದಾರ ಟಾಪ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಗರ ಬಿಷನುಪದ ಪೋರಿಯಾ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹಾಗೂ ಸುಮಾರು 5.5 ಅಡಿ ಎತ್ತರ ಹೊಂದಿದ್ದು, ಹಿಂದಿ, ಬಂಗಾಲಿ, ಕೊಂಕಣಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಅವರು ಬೂದು ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದರು.
ಇಬ್ಬರ ಬಗ್ಗೆಯೂ ಮಾಹಿತಿ ದೊರೆತಲ್ಲಿ ಅಥವಾ ಸಾರ್ವಜನಿಕರಿಗೆ ಕಂಡುಬಂದಲ್ಲಿ ತಕ್ಷಣ ಕಾರವಾರ ಮಹಿಳಾ ಪೊಲೀಸ್ ಠಾಣೆ ಪಿಐ: 8277987514, ಪಿಎಸ್ಐ: 8277987555 ಅಥವಾ ಕಾರವಾರ ಪೊಲೀಸ್ ಕಂಟ್ರೋಲ್ ರೂಂ: 9480805200 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.