ಉತ್ತರ ಕನ್ನಡದಲ್ಲೇ ಪ್ರಥಮ ಪ್ರಯತ್ನ; ಕೆಲಸಗಾರರಿಗೆ ಉಚಿತ ನೋಂದಣಿ, ಯಲ್ಲಾಪುರ–ಹೊನ್ನಾವರದಲ್ಲಿ ಪ್ರಾಯೋಗಿಕ ಚಾಲನೆ
ಯಲ್ಲಾಪುರ/ಹೊನ್ನಾವರ: ಮನೆಯಲ್ಲಿ ಪ್ಲಂಬರ್ ಬೇಕು, ವಿದ್ಯುತ್ ಕೆಲಸಕ್ಕೆ ಎಲೆಕ್ಟ್ರಿಷಿಯನ್ ಬೇಕು, ಸಿಸಿಟಿವಿ ಅಳವಡಿಸಬೇಕು, ಕಂಪ್ಯೂಟರ್ ರಿಪೇರಿ ಮಾಡಿಸಬೇಕು ಎಂದಾಗ ಸೂಕ್ತ ವ್ಯಕ್ತಿಯನ್ನು ಹುಡುಕುವುದೇ ಕೆಲವೊಮ್ಮೆ ದೊಡ್ಡ ಸವಾಲು. ಮತ್ತೊಂದೆಡೆ, ಕೌಶಲ್ಯವಿದ್ದರೂ ಕೆಲಸದ ಅವಕಾಶಕ್ಕಾಗಿ ಕಾಯುವ ಸ್ಥಳೀಯ ಕಾರ್ಮಿಕರು ಮತ್ತು ವೃತ್ತಿಪರರ ಸಂಖ್ಯೆಯೂ ಕಡಿಮೆಯಿಲ್ಲ. ಈ ಎರಡೂ ಸಮಸ್ಯೆಗಳಿಗೆ ಒಂದೇ ಡಿಜಿಟಲ್ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘Unitefix Services Pvt Ltd’ ಹೊಸ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಪ್ರಯತ್ನವಾಗಿರುವ ಈ ಡಿಜಿಟಲ್ ವೇದಿಕೆ, ಸ್ಥಳೀಯ ಕೌಶಲ್ಯಯುತ ಕೆಲಸಗಾರರು ಮತ್ತು ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವ ಉದ್ದೇಶ ಹೊಂದಿದೆ. ಕೇವಲ ಕೆಲಸಗಾರರನ್ನು ಹುಡುಕುವ ಆ್ಯಪ್ ಆಗಿರದೆ, ಸ್ಥಳೀಯ ಉದ್ಯೋಗಶೀಲತೆಗೆ ಉತ್ತೇಜನ ನೀಡುವ ಹಾಗೂ ಸಾರ್ವಜನಿಕರ ದೈನಂದಿನ ಅಗತ್ಯಗಳನ್ನು ಸುಲಭಗೊಳಿಸುವ ಡಿಜಿಟಲ್ ವ್ಯವಸ್ಥೆಯಾಗಿ ಇದನ್ನು ರೂಪಿಸಲಾಗಿದೆ.
ಕೌಶಲ್ಯ ಪ್ರದರ್ಶನಕ್ಕೆ ಅವಕಾಶ
ಕಂಪ್ಯೂಟರ್ ತಂತ್ರಜ್ಞರು, ಸಿಸಿಟಿವಿ ತಜ್ಞರು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಬಡಗಿಗಳು, ಪೇಂಟರ್‌ಗಳು, ಗೃಹೋಪಯೋಗಿ ವಸ್ತುಗಳ ದುರಸ್ತಿ ಮಾಡುವವರು ಸೇರಿದಂತೆ ವಿವಿಧ ಕ್ಷೇತ್ರಗಳ ನುರಿತ ಕಾರ್ಮಿಕರು ಮತ್ತು ವೃತ್ತಿಪರರು ಈ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ತಮ್ಮ ಸೇವೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಬಹುದು.
ಇದರಿಂದ ಕೆಲಸಗಾರರು ತಮ್ಮ ಕೌಶಲ್ಯವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಲಿದ್ದು, ಗ್ರಾಹಕರಿಗೂ ತಮ್ಮ ಅಗತ್ಯಕ್ಕೆ ತಕ್ಕ ಕೆಲಸಗಾರರನ್ನು ಸುಲಭವಾಗಿ ಹುಡುಕಿಕೊಳ್ಳಲು ಅವಕಾಶ ಸಿಗಲಿದೆ. ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ಕೆಲಸಗಾರ ಮತ್ತು ಗ್ರಾಹಕರ ನಡುವಿನ ಸಂಪರ್ಕದಲ್ಲಿ ಹೆಚ್ಚಿನ ಪಾರದರ್ಶಕತೆ ಮೂಡಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಸದ್ಯ ಉಚಿತ ನೋಂದಣಿ
ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಕೌಶಲ್ಯಯುತ ಕೆಲಸಗಾರರು ಸದ್ಯಕ್ಕೆ ಉಚಿತವಾಗಿ (Free Registration) ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಹಾಗೂ ವೃತ್ತಿಪರರು ಗೂಗಲ್ ಪ್ಲೇಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
ಯಲ್ಲಾಪುರ, ಹೊನ್ನಾವರದಲ್ಲಿ ಪೈಲಟ್ ಪ್ರಾಜೆಕ್ಟ್
ಸದ್ಯ ಯಲ್ಲಾಪುರ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಕೆಲವು ಪ್ರಮುಖ ಸೇವೆಗಳೊಂದಿಗೆ ಪ್ರಾಯೋಗಿಕ ಚಾಲನೆ (Pilot Project) ಆರಂಭಿಸಲಾಗಿದೆ. ಈ ಭಾಗದ ಸಾರ್ವಜನಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆ್ಯಪ್ ಮೂಲಕ ಕೆಲಸಗಾರರನ್ನು ಸಂಪರ್ಕಿಸಿ ಸೇವೆ ಪಡೆದುಕೊಳ್ಳಬಹುದಾಗಿದ್ದು, ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಸೇವೆಯನ್ನು ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಮುಂದಿನ ಹಂತದಲ್ಲಿ ಸರಕು–ಸಾಮಗ್ರಿಗಳ ಖರೀದಿ, ಮಾರಾಟ
ಸದ್ಯ ಆ್ಯಪ್‌ನಲ್ಲಿ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರಕು ಮತ್ತು ಸಾಮಗ್ರಿಗಳ ಮಾರಾಟ ಹಾಗೂ ಖರೀದಿಗೂ ಇದೇ ವೇದಿಕೆಯಲ್ಲಿ ಅವಕಾಶ ಕಲ್ಪಿಸುವ ಯೋಜನೆ ಇದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ಕುಮಾರ್ ಕೆ.ಹೆಗಡೆ, ನಾಗರಾಜ ಎಸ್.ಹೆಗಡೆ ಹಾಗೂ ಲಿಖಿತಾ ಎಸ್.
ಅಂದರೆ, ಒಬ್ಬ ಕೆಲಸಗಾರನನ್ನು ಹುಡುಕುವುದರಿಂದ ಹಿಡಿದು ಅಗತ್ಯ ವಸ್ತುಗಳನ್ನು ಖರೀದಿಸುವವರೆಗೆ ಸ್ಥಳೀಯ ಜನರಿಗೆ ಒಂದೇ ಡಿಜಿಟಲ್ ವೇದಿಕೆಯಲ್ಲಿ ಹಲವು ಸೇವೆಗಳನ್ನು ಒದಗಿಸುವತ್ತ ‘Unitefix’ ಹೆಜ್ಜೆ ಇಡುತ್ತಿದೆ.
ಸ್ಥಳೀಯ ಪ್ರತಿಭೆಗೆ ಸ್ಥಳೀಯ ಮಾರುಕಟ್ಟೆ
ʻನಮ್ಮ ಜಿಲ್ಲೆಯಲ್ಲೇ ಪ್ರಥಮವಾಗಿ ಸ್ಥಾಪಿತವಾಗಿರುವ ಈ ಡಿಜಿಟಲ್ ಸಂಸ್ಥೆಯ ಬೆಳವಣಿಗೆಗೆ ಜಿಲ್ಲೆಯ ಜನತೆ, ಉದ್ಯಮಿಗಳು ಹಾಗೂ ಕಾರ್ಮಿಕ ಬಂಧುಗಳ ಸಹಕಾರ ಅಗತ್ಯ. ಸ್ಥಳೀಯ ಕೆಲಸಗಾರರು ಮತ್ತು ವೃತ್ತಿಪರರು ಈ ಸ್ವದೇಶಿ ಆ್ಯಪ್ ಬಳಸುವ ಮೂಲಕ ಸ್ಥಳೀಯ ಉದ್ಯೋಗಶೀಲತೆಗೆ ಬೆಂಬಲ ನೀಡಬೇಕುʼ ಎಂದು ಸಂಸ್ಥೆಯ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಇದೇ ವೇಳೆ, ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರು ಸಂಪರ್ಕಿಸಬಹುದು ಎಂದೂ ಅವರು ತಿಳಿಸಿದ್ದಾರೆ. ಕೆಲಸಗಾರರನ್ನು ಹುಡುಕುವ ಗ್ರಾಹಕ ಮತ್ತು ಕೆಲಸಕ್ಕಾಗಿ ಕಾಯುತ್ತಿರುವ ಕಾರ್ಮಿಕ ಈ ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನ ಉತ್ತರ ಕನ್ನಡದ ಡಿಜಿಟಲ್ ಉದ್ಯಮಶೀಲತೆಯಲ್ಲಿ ಗಮನ ಸೆಳೆಯುವ ಹೆಜ್ಜೆಯಂತೂ ಹೌದು.
ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ
UniteFix ಆ್ಯಪ್ ಅನ್ನು Google Play Store ಮೂಲಕ ಡೌನ್‌ಲೋಡ್ ಮಾಡಿಕೊಂಡು, ಆಸಕ್ತರು ತಮಗೆ ಅಗತ್ಯವಿರುವ ಸೇವೆಗಳನ್ನು ಪಡೆದುಕೊಳ್ಳಬಹುದು. ಸ್ಥಳೀಯವಾಗಿ ಲಭ್ಯವಿರುವ ವಿವಿಧ ಸೇವಾ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು ಈ ಆ್ಯಪ್ ಬಳಸಬಹುದಾಗಿದೆ. ಆಸಕ್ತ ಕೆಲಸಗಾರರು ಹಾಗೂ ಸೇವೆ ಪಡೆಯಲು ಬಯಸುವ ಸಾರ್ವಜನಿಕರು ಲಿಂಕ್ https://play.google.com/store/apps/details?id=com.unitefix.app ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು.
# Sponsored Content