ಕಾರವಾರ: ಕದ್ರಾ ಮತ್ತು ಮಲ್ಲಾಪುರ ಭಾಗಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು. ಬಳಿಕ ಪ್ರಸಾದ ಸ್ವೀಕರಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು.
ಕದ್ರಾ ಮತ್ತು ಮಲ್ಲಾಪುರದಲ್ಲಿ ಹಲವು ವರ್ಷಗಳಿಂದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷವೂ ವಿಭಿನ್ನ ಹಾಗೂ ಸೃಜನಾತ್ಮಕ ಪರಿಕಲ್ಪನೆಗಳೊಂದಿಗೆ ಗಣೇಶನ ಮೂರ್ತಿಯನ್ನು ಅಲಂಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಯ ಸದಸ್ಯರನ್ನು ಭೇಟಿಯಾದ ರೂಪಾಲಿ ನಾಯ್ಕ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಪ್ರಮುಖರಾದ ಕೃಷ್ಣಾ ನಾಯ್ಕ, ವಿಕೇಶ್ ಬಾಂದೇಕರ, ದತ್ತಾರಾಮ ಬಾಂದೇಕರ, ಬಾಬು ನಾಯ್ಕ, ಗೋವಿಂದ ಮಿರಾಶಿ, ಸುಭಾಷ್ ಬಾಂದೇಕರ, ಸಂಜಯ ಗೌಡ, ಮುಕುಂದ ಗೌಡ, ಅಭಿಲಾಷ್ ವಾಸವನ್, ಗಣೇಶ್ ಸಾವಂತ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.