Sunday, September 20, 2026
Join WhatsApp Group
HomeLocal Newsಹೊನ್ನಾವರ | ಮಹಿಳೆ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

ಹೊನ್ನಾವರ | ಮಹಿಳೆ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

ಹೊನ್ನಾವರ: ತಾಲೂಕಿನ ಕೆಳಗಿನಪಾಳ್ಯ ಚರ್ಚ್ ರಸ್ತೆಯ ನಿವಾಸಿ ಉಷಾ ಸುರೇಶ ಗೋಸಾವಿ (39) ಅವರು ಸೆ.11ರಂದು ಮನೆಯಿಂದ ಹೊರಗೆ ಹೋದವರು ಮನೆಗೆ ಮರಳದೇ ಕಾಣೆಯಾಗಿದ್ದಾರೆ ಎಂದು ಹೊನ್ನಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಉಷಾ ಅವರು ದುಂಡುಮುಖ, ಗೋಧಿ ಮೈಬಣ್ಣ, ತೆಳ್ಳಗಿನ ಮೈಕಟ್ಟು ಹೊಂದಿದ್ದು, 5.1 ಅಡಿ ಎತ್ತರವಿದ್ದಾರೆ. ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಎಲ್ಲಾದರೂ ಸಾರ್ವಜನಿಕರಿಗೆ ಕಂಡುಬಂದಲ್ಲಿ ಅಥವಾ ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾದಲ್ಲಿ ಹೊನ್ನಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share