ಶಿರಸಿ: ಹುಣಸೆಕೊಪ್ಪ ಗ್ರಾಮ ಪಂಚಾಯಿತಿ ಎದುರು ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನದ ವತಿಯಿಂದ ನಡೆದ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಡಿ. ಹೆಗಡೆ ಮಾತನಾಡಿ, ಸರ್ಕಾರದ ಜನವಿರೋಧಿ ನೀತಿ ಹಾಗೂ ಜನವಿರೋಧಿ ಸುತ್ತೋಲೆಯನ್ನು ಖಂಡಿಸಿದರಲ್ಲದೆ, ಸರ್ಕಾರ ಕೂಡಲೇ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಉಪೇಂದ್ರ ಪೈ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿ, ಸುತ್ತೋಲೆಯಿಂದ ಬಾಧಿತರಾಗಿರುವ ಜನರ ಪರವಾಗಿ ಜೆಡಿಎಸ್ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಗಣಪತಿ ಹೆಗಡೆ, ಗಣೇಶ ಹೆಗಡೆ, ನಾರಾಯಣ ಹೆಗಡೆ, ಗಣೇಶ ಹೆಗಡೆ ಹೊಸಗದ್ದೆ, ವಿದ್ಯಾಧರ ಹೆಗಡೆ, ಪರಮೇಶ್ವರ ಹೆಗಡೆ, ಪುರುಷೋತ್ತಮ ಅಂಬಿಗ, ಗಜಾನನ ಅಂಬಿಗ ಕಲ್ಮನೆ, ವಿನಾಯಕ ಭಟ್ಟ, ಸತೀಶ ಹೆಗಡೆ, ರಜನಿ ಹೆಗಡೆ, ಗಣಪತಿ ನಾಯ್ಕ, ಶಾಂತಾರಾಮ ಹೆಗಡೆ ಸೇರಿದಂತೆ ಸ್ತ್ರೀಶಕ್ತಿ ಸಂಘದ ಮಹಿಳೆಯರು, ಬಿಜೆಪಿ ಕಾರ್ಯಕರ್ತರು ಹಾಗೂ ಬಾಧಿತ ಸಾರ್ವಜನಿಕರು ಉಪಸ್ಥಿತರಿದ್ದರು.


