Friday, October 23, 2026
HomeLocal News13 ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ

13 ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ

ಕಾರವಾರ: ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವ ಹಾಗೂ ಲೆಕ್ಕಪರಿಶೋಧನೆ ಸೇರಿದಂತೆ ಅಗತ್ಯ ಮಾಹಿತಿಗಳು ಲಭ್ಯವಿಲ್ಲದ ಕಾರವಾರ ಉಪವಿಭಾಗದ ವ್ಯಾಪ್ತಿಯ 13 ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮುಂದಾಗಿದೆ.

ಕಾರವಾರ ಉಪವಿಭಾಗದ ವ್ಯಾಪ್ತಿಗೆ ಬರುವ ಕೆನರಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಶ್ರೀ ವಿಜಯಲಕ್ಷ್ಮೀ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಸುವರ್ಣಕಾರರ ಕೈಗಾರಿಕಾ ಸಹಕಾರ ಸಂಘ ನಿಯಮಿತ, ಕಾರವಾರ ಮಹಿಳಾ ಔದ್ಯೋಗಿಕ ಸಹಕಾರಿ ಸಂಘ ನಿಯಮಿತ, ದೇವಭಾಗ–ಕಣಸಗಿರಿ ಮೀನುಗಾರರ ಮಹಿಳಾ ಸಹಕಾರ ಸಂಘ ನಿಯಮಿತ, ದೇವಭಾಗ ನವಸಾಕ್ಷರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ, ಕೆರವಡಿಯ ಶ್ರೀ ಸಾತೇರಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಹಾಗೂ ಚಿತ್ತಾಕುಲದ ಬಿಣಗಾ ಮೀನುಗಾರರ ಸಹಕಾರ ಸಂಘ ನಿಯಮಿತ ಸೇರಿದಂತೆ 13 ಸಂಘಗಳು ತಮ್ಮ ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಕಾರವಾರದ ಗೌರ್ನಮೆಂಟ್ ನೌಕರರ ಶ್ರೀ ಸಜ್ಜೇಶ್ವರ ಹೌಸಿಂಗ್ ಕೋ-ಆಪ್ ಸೊಸೈಟಿ ನಿಯಮಿತ, ಜೋಯಿಡಾದ ಮಾವಳಿಂಗ ಗಂಗಾ ಕಲ್ಯಾಣ ಯೋಜನಾ ಫಲಾನುಭವಿಗಳ ಸಹಕಾರ ಸಂಘ ನಿಯಮಿತ, ಆನ್ಮಿ ಕುಣಬಿ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ, ಹಳಿಯಾಳ ತಾಲೂಕಿನ ಸಾಂಬ್ರಾಣಿ ಅರಣ್ಯ ನಿವಾಸಿಗಳ ಅರಣ್ಯ ಉತ್ಪತ್ತಿ ಶೇಖರಣೆ ಗುತ್ತಿಗೆ ಮಾರಾಟ ಸಹಕಾರ ಸಂಘ ನಿಯಮಿತ ಹಾಗೂ ದಾಂಡೇಲಿಯ ಗೋಪಾಲ ಡೇರಿ ಆ್ಯಂಡ್ ಮಲ್ಪಿಪರ್ಪಸ್ ಕೋ-ಆಪ್ ಸೊಸೈಟಿ ನಿಯಮಿತ ಕೂಡ ಈ ಪಟ್ಟಿಯಲ್ಲಿವೆ.

ಈ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿ ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅಲ್ಲದೆ ಹಲವು ವರ್ಷಗಳಿಂದ ಸಂಘಗಳ ವ್ಯವಹಾರಗಳ ಲೆಕ್ಕಪರಿಶೋಧನೆಯೂ ನಡೆದಿಲ್ಲ. ಸಂಘಗಳಿಗೆ ಕೊಡತಕ್ಕ ಅಥವಾ ಬರತಕ್ಕ ಬಾಬ್ತುಗಳ ಕುರಿತ ಮಾಹಿತಿಯೂ ಲಭ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸದರಿ ಸಹಕಾರ ಸಂಘಗಳಲ್ಲಿ ಯಾರಿಗಾದರೂ ಹಣ ಕೊಡತಕ್ಕ ಅಥವಾ ಯಾರಿಂದಲಾದರೂ ಹಣ ಬರತಕ್ಕ ಬಾಬ್ತುಗಳಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ದಿನದಿಂದ 7 ದಿನಗಳೊಳಗಾಗಿ ಕಾರವಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಜಿ.ಕೆ. ರಾಮ ಬಿಲ್ಡಿಂಗ್, ಹಬ್ಬುವಾಡಾ, ಕಾರವಾರ ಕಚೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಸಲ್ಲಿಸದಿದ್ದಲ್ಲಿ, ಈ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ನಂತರ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಾಪನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share