Friday, October 23, 2026
HomeStateಅತ್ಯುತ್ತಮ SDMC; ನಿಮ್ಮೂರ ಶಾಲೆಗೂ ಸಿಗಬಹುದು ಪ್ರಶಸ್ತಿ!

ಅತ್ಯುತ್ತಮ SDMC; ನಿಮ್ಮೂರ ಶಾಲೆಗೂ ಸಿಗಬಹುದು ಪ್ರಶಸ್ತಿ!

ಬೆಂಗಳೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕವು 2026-27ನೇ ಸಾಲಿನ ಅತ್ಯುತ್ತಮ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (SDMC) ಆಯ್ಕೆ ಮಾಡಿ ಪ್ರಶಸ್ತಿ ನೀಡಲು ಮುಂದಾಗಿದೆ.

ಶಾಲೆಯ ಕಾರ್ಯಚಟುವಟಿಕೆ, ಶೈಕ್ಷಣಿಕ ಅಭಿವೃದ್ಧಿ, ಮೂಲಸೌಕರ್ಯ, ಶಾಲಾ ಪರಿಸರ ಹಾಗೂ SDMC ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದ್ದು, ಸೆ.21ರಿಂದ ಅ.22ರವರೆಗೆ ನಾಲ್ಕು ಹಂತಗಳಲ್ಲಿ ನಡೆಯಲಿದೆ.ಜಿಲ್ಲಾ ತಂಡದ ಪರಿಶೀಲನೆ ಬಳಿಕ ತಂತ್ರಾಂಶದ ಮೂಲಕ ಪ್ರತಿ ತಾಲೂಕಿನಿಂದ ಮೂರು ಅತ್ಯುತ್ತಮ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ.

ರಾಜ್ಯದ 204 ತಾಲೂಕುಗಳಿಂದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗಗಳಲ್ಲಿ ತಲಾ ಒಂದು ಶಾಲೆಯಂತೆ ಒಟ್ಟು 612 ಶಾಲೆಗಳು ಪ್ರಶಸ್ತಿಗೆ ಆಯ್ಕೆಯಾಗಲಿವೆ.ಆಯ್ಕೆಯಾಗುವ ಕಿರಿಯ ಪ್ರಾಥಮಿಕ ಶಾಲೆಗೆ ರೂ.50 ಸಾವಿರ, ಹಿರಿಯ ಪ್ರಾಥಮಿಕ ಶಾಲೆಗೆ ರೂ.75 ಸಾವಿರ ಹಾಗೂ ಪ್ರೌಢಶಾಲೆಗೆ ರೂ.1 ಲಕ್ಷ ಬಹುಮಾನ ನೀಡಲಾಗುತ್ತದೆ.

ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರು ಮತ್ತು SDMC ಸದಸ್ಯರ ಜೊತೆಗೆ ಪೋಷಕರು ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವವೂ ಪ್ರಮುಖವಾಗಿದ್ದು, ಈ ಪ್ರಶಸ್ತಿ ಕಾರ್ಯಕ್ರಮವು ಶಾಲೆ ಮತ್ತು ಸಮುದಾಯದ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share