Ad
Ad
Ad
Home National ಭೂತಾನ್‌ನಲ್ಲಿ ಔಷಧ ಕ್ಷೇತ್ರಕ್ಕೆ ಹೊಸ ಚಿಂತನೆ

ಭೂತಾನ್‌ನಲ್ಲಿ ಔಷಧ ಕ್ಷೇತ್ರಕ್ಕೆ ಹೊಸ ಚಿಂತನೆ

0
23

ನವದೆಹಲಿ: ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಆಧುನಿಕ ವೈಜ್ಞಾನಿಕ ವಿಧಾನಗಳೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಭೂತಾನ್‌ನಲ್ಲಿ ‘ಗ್ರೀನ್ ನ್ಯಾನೋಟೆಕ್ನಾಲಜಿ ಇನ್ ಟ್ರೆಡಿಷನಲ್ ಮೆಡಿಸಿನ್’ ಕುರಿತ ಎರಡು ದಿನಗಳ ವಿಚಾರ ಸಂಕಿರಣ ನಡೆದಿರುವ ಕುರಿತು ಮಾಜಿ ಸಂಸದ ಅನಂತಕುಮಾರ್ ಹೆಗಡೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Ad

ಕದಂಬ, ಪ್ರೋಗ್ರೋ ಇಂಟರ್‌ನ್ಯಾಷನಲ್, ಮೆಂಜೋಂಗ್ ಸೊರಿಗ್–ರಾಯಲ್ ಗವರ್ನಮೆಂಟ್ ಆಫ್ ಭೂತಾನ್ ಹಾಗೂ ಭೂತಾನ್ ಫೌಂಡೇಶನ್ ಸಹಯೋಗದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಅಧಿಕಾರಿಗಳು, ಸೋವಾ ರಿಗ್ಪಾ ತಜ್ಞರು ಹಾಗೂ ಪ್ರಮುಖ ವೈದ್ಯಕೀಯ ಕ್ಷೇತ್ರದ ಪರಿಣತರು ಭಾಗವಹಿಸಿದ್ದರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಸಿರು ನ್ಯಾನೋ ತಂತ್ರಜ್ಞಾನ ಮತ್ತು ಸಸ್ಯಾಧಾರಿತ ಔಷಧಗಳ ವೈಜ್ಞಾನಿಕ ಆಧಾರ, ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ ಮುಂದಿನ ತಲೆಮಾರಿನ ಹಸಿರು ಔಷಧಗಳ ಅಭಿವೃದ್ಧಿ ಹಾಗೂ ಭೂತಾನ್‌ನ ಅಪಾಯದಲ್ಲಿರುವ ಹಿಮಾಲಯದ ಔಷಧೀಯ ಸಸ್ಯಗಳ ಸುಸ್ಥಿರ ಬಳಕೆ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆದಿರುವುದಾಗಿ ತಿಳಿಸಿದ್ದಾರೆ.

ಇದರೊಂದಿಗೆ ಔಷಧೀಯ ಸಸ್ಯಗಳನ್ನು ಸಂಗ್ರಹಿಸುವ ಸಾಂಪ್ರದಾಯಿಕ ಸಮುದಾಯಗಳಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಈ ಔಷಧೀಯ ಸಂಪನ್ಮೂಲಗಳಿಗೆ ಜವಾಬ್ದಾರಿಯುತ ಜಾಗತಿಕ ಪ್ರವೇಶವನ್ನು ವಿಸ್ತರಿಸುವ ಕುರಿತೂ ಚರ್ಚೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕದಂಬ ಸಂಸ್ಥೆಯು ಭೂತಾನ್‌ನ ಹೂಡಿಕೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭವಿಷ್ಯದ ಸಹಕಾರ ಹಾಗೂ ಈ ಉಪಕ್ರಮವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಸಿದೆ ಎಂದು ಅನಂತಕುಮಾರ್ ಹೆಗಡೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!