ಬನವಾಸಿ: ಶರನ್ನವರಾತ್ರಿಯ ಮೊದಲ ದಿನದ ಅಂಗವಾಗಿ ಬನವಾಸಿಯ ಶ್ರೀ ಉಮಾಮಧುಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಪಾರ್ವತಿ ದೇವಿಗೆ ಶೈಲಪುತ್ರಿ ಅಲಂಕಾರ ನೆರವೇರಿಸಲಾಯಿತು.
ದೇವಸ್ಥಾನದ ಅರ್ಚಕ ನಾಗೇಶ ಪತ್ರೆ ಅವರು ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನವರಾತ್ರಿಯ ಮೊದಲ ದಿನ ಆರಾಧಿಸಲ್ಪಡುವ ಶೈಲಪುತ್ರಿ ದೇವಿಯನ್ನು ಶಕ್ತಿ, ಧೈರ್ಯ ಹಾಗೂ ಭಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತದೆ.
ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಪಾರ್ವತಿ ದೇವಿಯ ದರ್ಶನ ಪಡೆದ ಭಕ್ತರು ಪೂಜೆ ಸಲ್ಲಿಸಿದರು. ಶರನ್ನವರಾತ್ರಿಯ ಮುಂದಿನ ದಿನಗಳಲ್ಲಿಯೂ ದೇವಿಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.


