ಬನವಾಸಿ: ಶಿರಸಿ–ಹಾವೇರಿ ಮುಖ್ಯ ರಸ್ತೆಯಲ್ಲಿ ಸ್ಕೂಟರ್ಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನ ಹಿಂಬದಿ ಸವಾರ ಮೃತಪಟ್ಟ ಘಟನೆ ಅ.11ರಂದು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ನ ವಿಜಯ್ ಗಣೇಶ ಮೂಳೆ (34) ಅವರು ತಮ್ಮ ತಂದೆ ಗಣೇಶ ಮೂಳೆ ಅವರೊಂದಿಗೆ ಸ್ಕೂಟರ್ನಲ್ಲಿ (KA 31-EA 5896) ದಾಸನಕೊಪ್ಪದ ಕಡೆಗೆ ತೆರಳುತ್ತಿದ್ದರು. ವಿಜಯ್ ಸ್ಕೂಟರ್ ಚಲಾಯಿಸುತ್ತಿದ್ದು, ತಂದೆ ಗಣೇಶ ಹಿಂಬದಿಯಲ್ಲಿ ಕುಳಿತಿದ್ದರು.
ಕಾಳಂಗಿ ಎಚ್ಪಿ ಗ್ಯಾಸ್ ಕ್ರಾಸ್ನಿಂದ ಸುಮಾರು 500 ಮೀಟರ್ ಹಿಂದೆ ಸಾಗುತ್ತಿದ್ದಾಗ, ಅದೇ ಮಾರ್ಗದಲ್ಲಿ ಹಾನಗಲ್ ಕಡೆಯಿಂದ ದಾಸನಕೊಪ್ಪದ ಕಡೆಗೆ ಬರುತ್ತಿದ್ದ ಬೈಕ್ (KA 25-EP 2318) ಸವಾರ, ಹಾನಗಲ್ ಮೂಲದ, ಹಾಲಿ ಬನವಾಸಿಯ ಅಂಡಗಿ ನಿವಾಸಿ ಇಮಾಮ ಕಾಶೀಂ ಬಾಷಾಸಾಬ ಹಸ್ನಾಬಾದಿ ಹಿಂದಿನಿಂದ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ನ ಹಿಂಬದಿಯಲ್ಲಿ ಕುಳಿತಿದ್ದ ಗಣೇಶ ಅವರು ರಸ್ತೆಗೆ ಬಿದ್ದಿದ್ದು, ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ವಿಜಯ್ ಅವರು ಅಪಘಾತದ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೈಕ್ ಸವಾರ ಇಮಾಮ್ ಕಾಶೀಂ ಹಸ್ನಾಬಾದಿ (24) ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂದು ವಿಜಯ್ ಅವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


