Friday, October 23, 2026
HomeCultureರಂಗೋಲಿಯ ಬಣ್ಣಗಳಲ್ಲಿ ಅರಳಿದ 26 ವರ್ಷಗಳ ಭಕ್ತಿ

ರಂಗೋಲಿಯ ಬಣ್ಣಗಳಲ್ಲಿ ಅರಳಿದ 26 ವರ್ಷಗಳ ಭಕ್ತಿ

ಬನವಾಸಿ: ಬಣ್ಣಗಳ ಚಿತ್ತಾರದಲ್ಲಿ ಭಕ್ತಿಭಾವ ಅರಳಿಸಿ, ರಂಗೋಲಿಯ ಮೂಲಕ ದೇವರ ಸೇವೆ ಸಲ್ಲಿಸುತ್ತಿರುವ ಇಬ್ಬರು ಕಲಾವಿದೆಯರು ಬನವಾಸಿಯ ಶ್ರೀ ಉಮಾಮಧುಕೇಶ್ವರ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವದ ವಿಶೇಷ ಆಕರ್ಷಣೆಯಾಗಿದ್ದಾರೆ.

ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವಸ್ಥಾನದಲ್ಲಿ ಖ್ಯಾತ ರಂಗೋಲಿ ಕಲಾವಿದೆಯರಾದ ಗೌರಿ ಅರವಿಂದ ಶೆಟ್ಟಿ ಹಾಗೂ ಪೂರ್ಣಿಮಾ ಶೆಟ್ಟಿ ಅವರು ಸತತ 26 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ನೃತ್ಯ ಮಂಟಪದಲ್ಲಿ ಆಕರ್ಷಕ ರಂಗೋಲಿಗಳನ್ನು ಬಿಡಿಸುತ್ತಾ ಬಂದಿದ್ದಾರೆ.

ಪ್ರತಿ ವರ್ಷವೂ ಬಣ್ಣಗಳ ಸುಂದರ ಸಂಯೋಜನೆ, ಸೂಕ್ಷ್ಮ ವಿನ್ಯಾಸ ಹಾಗೂ ಕಲಾತ್ಮಕ ಚಿತ್ತಾರಗಳ ಮೂಲಕ ನೃತ್ಯ ಮಂಟಪಕ್ಕೆ ಹೊಸ ಮೆರುಗು ನೀಡುವ ಇವರ ಕಲಾಸೇವೆ ಭಕ್ತರ ಗಮನ ಸೆಳೆಯುತ್ತಿದೆ. ರಂಗೋಲಿಯ ಪ್ರತಿಯೊಂದು ವಿನ್ಯಾಸದಲ್ಲೂ ಕಲಾಪ್ರತಿಭೆಯ ಜೊತೆಗೆ ಭಕ್ತಿಭಾವವನ್ನೂ ಅಭಿವ್ಯಕ್ತಿಸುವುದು ಇವರ ಸೇವೆಯ ವಿಶೇಷತೆ.

ಕಳೆದ 26 ವರ್ಷಗಳಿಂದ ನಿರಂತರವಾಗಿ ಈ ಸೇವೆಯನ್ನು ಮುಂದುವರಿಸಿಕೊಂಡು ಬಂದಿರುವ ಗೌರಿ ಅರವಿಂದ ಶೆಟ್ಟಿ ಹಾಗೂ ಪೂರ್ಣಿಮಾ ಶೆಟ್ಟಿ ಅವರ ಕಲಾಭಕ್ತಿ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿದೆ.

ಭಾರತೀಯ ಸಾಂಪ್ರದಾಯಿಕ ಕಲೆಯ ಸೊಗಡನ್ನು ಉಳಿಸಿ, ಅದನ್ನು ದೇವರ ಸೇವೆಯೊಂದಿಗೆ ಬೆಸೆದಿರುವ ಇವರ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ಸುಧೀರ ನಾಯರ್, ಬನವಾಸಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share