Ad
Ad
Ad
Home Crime ಶಿರಸಿ | ಕುಣಿಕೆಗೆ ಕೊರಳೊಡ್ಡಿದ ಭರಣಿಯ ಪಿಯುಸಿ ವಿದ್ಯಾರ್ಥಿ; ಮೂಡಿದ ಸಂಶಯ

ಶಿರಸಿ | ಕುಣಿಕೆಗೆ ಕೊರಳೊಡ್ಡಿದ ಭರಣಿಯ ಪಿಯುಸಿ ವಿದ್ಯಾರ್ಥಿ; ಮೂಡಿದ ಸಂಶಯ

0
12

ಶಿರಸಿ: ಶಿರಸಿ ತಾಲೂಕಿನ ಚಿಪಗಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಕಾಲೇಜಿಗೆ ಹೋಗುತ್ತಿದ್ದ 17 ವರ್ಷದ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಅ.11ರಂದು ಬೆಳಕಿಗೆ ಬಂದಿದೆ. ಮಗನ ಸಾವಿನ ಬಗ್ಗೆ ಸಂಶಯವಿದೆ ಎಂದು ತಂದೆ ನೀಡಿದ ದೂರಿನ ಆಧಾರದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

Ad

ಯಲ್ಲಾಪುರ ತಾಲೂಕಿನ ಭರಣಿ ಗ್ರಾಮದ ಸುಮಂತ ಮಾದೇವ ನಾಯ್ಕ ಅವರ ಪುತ್ರ ಆದಿತ್ಯ ನಾಯ್ಕ (17) ಶಿರಸಿ ತಾಲೂಕಿನ ಗೌಡಳ್ಳಿಯ ಚಂದನ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಊರಿನಿಂದ ಕಾಲೇಜಿಗೆ ಪ್ರತಿದಿನ ಹೋಗಿಬರಲು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಚಿಪಗಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮುಂದುವರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅ.11ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 7.30ರ ನಡುವಿನ ಅವಧಿಯಲ್ಲಿ ತಾನು ವಾಸವಿದ್ದ ಮನೆಯ ಕೋಣೆಯಲ್ಲಿ ಆದಿತ್ಯ ಮೃತಪಟ್ಟಿರುವುದಾಗಿ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಗನ ಸಾವಿನ ಬಗ್ಗೆ ಸಂಶಯವಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!