ಗೋಕರ್ಣ: ಇಲ್ಲಿನ ಹಾಫ್ಮೂನ್ ಬೀಚ್ನ ದಡದಲ್ಲಿ ನಿಲ್ಲಿಸಿದ್ದ ಜಲಸಾಹಸ ಕ್ರೀಡೆಗೆ ಬಳಸುವ ಎರಡು ಬೋಟ್ಗಳನ್ನು ಯಾರೋ ದುಷ್ಕರ್ಮಿಗಳು ಹರಿದು ಹಾನಿಗೊಳಿಸಿರುವ ಘಟನೆ ನಡೆದಿದೆ. ಘಟನೆಯಿಂದ ಸುಮಾರು 1.80 ಲಕ್ಷ ರೂ. ನಷ್ಟವಾಗಿರುವುದಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಮಟಾ ತಾಲೂಕಿನ ಅಘನಾಶಿನಿ ನಿವಾಸಿ ಚಂದ್ರಕಾಂತ ಗೋವಿಂದ ಲಕ್ಕುಮನೆ ಅವರು ಪ್ರವಾಸೋದ್ಯಮ ಇಲಾಖೆಯ ಟೆಂಡರ್ ಮೂಲಕ ಬನಾನಾ ಬೋಟ್ ಮತ್ತು ಬಂಪರ್ ಬೋಟ್ ಬಳಸಿ ಜಲಸಾಹಸ ಕ್ರೀಡೆ ನಡೆಸುತ್ತಿದ್ದರು. ಅ.11ರಂದು ಪ್ರವಾಸಿಗರಿಗೆ ಬೋಟ್ ರೈಡ್ ನಡೆಸಿದ ಬಳಿಕ ಸಂಜೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಫ್ಮೂನ್ ಬೀಚ್ನ ದಡದಲ್ಲಿ ಎರಡೂ ಬೋಟ್ಗಳನ್ನು ನಿಲ್ಲಿಸಿ ತೆರಳಿದ್ದರು.
ಅ.11ರ ಸಂಜೆ 6 ಗಂಟೆಯಿಂದ ಅ.12ರ ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಿಡಿಗೇಡಿಗಳು ಚೂಪಾದ ವಸ್ತುವಿನಿಂದ ಬೋಟ್ಗಳನ್ನು ಚುಚ್ಚಿ ಹರಿದು ಹಾನಿಗೊಳಿಸಿದ್ದು, ಇದರಿಂದ ಸುಮಾರು 1.80 ಲಕ್ಷ ರೂ. ನಷ್ಟವಾಗಿದೆ ಎಂದು ಚಂದ್ರಕಾಂತ ಲಕ್ಕುಮನೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


