ಶಿರಸಿ: ತಾಲೂಕಿನ ಬಿಸಲಕೊಪ್ಪದಲ್ಲಿ ಗೋವಿಂದ ದೇವಾಡಿಗ ಅವರ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಜುಗಾರಾಟ ಆಡುತ್ತಿದ್ದ ಆರೋಪದ ಮೇರೆಗೆ 11 ಮಂದಿಯ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಲಕೊಪ್ಪ–ಬೆಡಸಗಾಂವ ರಸ್ತೆಯ ಬಿಸಲಕೊಪ್ಪದಲ್ಲಿ ಗೋವಿಂದ ದೇವಾಡಿಗ ಅವರ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಜುಗಾರಾಟ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿತರಿಂದ 8,780 ರೂ. ನಗದು, 52 ಇಸ್ಪೀಟ್ ಎಲೆಗಳು ಹಾಗೂ ಒಂದು ಚಾರ್ಜಿಂಗ್ ಬ್ಯಾಟರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಬಿಸಲಕೊಪ್ಪದ ರಾಘವೇಂದ್ರ ಪೂಜಾರಿ, ಬಿಸಲಕೊಪ್ಪ-ಸುಭಾಷನಗರದ ಮಹೇಂದ್ರ ಪೂಜಾರಿ, ಉಲ್ಲಾಳದ ಸಂತೋಷ ಗೌಡ, ಉಲ್ಲಾಳದ ಗೇರಮನೆಯ ಚಂದ್ರಶೇಖರ ಗೌಡ, ಮಳಲಗಾಂವ-ಬುಗುಡಿಕೊಪ್ಪದ ವಿಜಯ ಗೌಡ, ಶಿರಸಿಯ ಅನಗೋಡಕೊಪ್ಪದ ಗಂಗಾಧರ ಗೌಡ, ಉಲ್ಲಾಳದ ಗೇರಮನೆಯ ಮಹೇಶ ಪಟಗಾರ, ಬಿಸಲಕೊಪ್ಪದ ಹಕ್ಕಲಕೇರಿಯ ಸೀನಾ ಪೂಜಾರಿ, ಶಿರಸಿ ತಾಲೂಕಿನ ಮಳಲಗಾಂವದ ಮನೋಹರ ಶೇಟ್, ಶಿರಸಿಯ ಅನಗೋಡಕೊಪ್ಪದ ಮಣಿಕಂಠ ಬಿ.ಗೌಡ ಹಾಗೂ ಬಿಸಲಕೊಪ್ಪದ ಗಾಳಿಮನೆಯ ರಾಘವೇಂದ್ರ ನಾಯ್ಕ ಇವರುಗಳನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಪಿಎಸ್‌ಐ ಅಶೋಕ ಆರ್. ರಾಠೋಡ ನಡೆಸುತ್ತಿದ್ದಾರೆ.