Ad
Ad
Ad
Home Local News ನ. 3ರ ಹೆದ್ದಾರಿ ತಡೆ ಹೋರಾಟ ಯಶಸ್ವಿಗೊಳಿಸಲು ಕರೆ

ನ. 3ರ ಹೆದ್ದಾರಿ ತಡೆ ಹೋರಾಟ ಯಶಸ್ವಿಗೊಳಿಸಲು ಕರೆ

0
71

ಯಲ್ಲಾಪುರ: ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರೋಧಿ ಹೋರಾಟಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಪ್ರೇರಣೆ ಮತ್ತು ಮಾರ್ಗದರ್ಶನ ದೊಡ್ಡ ಶಕ್ತಿಯಾಗಿದೆ. ನ. 3ರಂದು ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಹರಿಪ್ರಕಾಶ ಕೋಣೆಮನೆ ಕರೆ ನೀಡಿದರು.

Ad

ಅ. 15ರ ರಾತ್ರಿ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಸಮಿತಿಯ ವತಿಯಿಂದ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸ್ವರ್ಣವಲ್ಲೀ ಶ್ರೀಗಳಿಗೆ ಯಲ್ಲಾಪುರ ಸೀಮೆಯ ಶಿಷ್ಯರ ಬಗ್ಗೆ ಅಪಾರ ಕಳಕಳಿ ಇದೆ. ಶ್ರೀಗಳ ಸೂಚನೆ ಮತ್ತು ಮಾರ್ಗದರ್ಶನದಂತೆ ನ. 3ರಂದು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಳ್ಳಲಾಗಿದೆ. ನದಿ ತಿರುವು ಯೋಜನೆಯನ್ನು ಹಿಮ್ಮೆಟ್ಟಿಸುವ ವಿಶ್ವಾಸವಿದೆ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋರಾಟಕ್ಕೆ ಸ್ಪಂದಿಸದಿದ್ದರೆ ಸ್ವತಃ ಶ್ರೀಗಳೇ ಮುಂದಿನ ಹಂತದ ಹೋರಾಟಕ್ಕೆ ಹೆಜ್ಜೆ ಇಡಲಿದ್ದಾರೆ ಎಂದು ಅವರು ತಿಳಿಸಿದರು. ಅಂತಹ ಪರಿಸ್ಥಿತಿ ಎದುರಾಗದಂತೆ ಹೆದ್ದಾರಿ ತಡೆ ಹೋರಾಟವನ್ನು ಯಶಸ್ವಿಗೊಳಿಸಲು ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಸಮಿತಿಯ ಕಾರ್ಯಕರ್ತ ವೆಂಕಟರಮಣ ಭಟ್ ಕಿರಕುಂಭತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ರಸ್ತೆ ತಡೆ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ, ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಎಲ್‌ಎಸ್‌ಎಂಪಿ ಅಧ್ಯಕ್ಷ ನಾಗರಾಜ ಕವಡಿಕೆರೆ, ನಂದೊಳ್ಳಿ ಸೊಸೈಟಿ ಅಧ್ಯಕ್ಷ ಟಿ.ವಿ. ಭಾಗ್ವತ, ಕಣ್ಣಿಗೇರಿ ಸೊಸೈಟಿ ಅಧ್ಯಕ್ಷ ಶೇಷಗಿರಿ ಭಟ್, ಮಾತೃಮಂಡಳಿ ಅಧ್ಯಕ್ಷೆ ಕಾವೇರಿ ಭಾಗ್ವತ್, ಶ್ರೀರಾಮ ಭಟ್ ಲಾಲಗುಳಿ, ಸಮಿತಿಯ ಪ್ರಮುಖರಾದ ವೆಂಕಟರಮಣ ಬೆಳ್ಳಿ, ನರಸಿಂಹ ಸಾತೊಡ್ಡಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!