Friday, July 24, 2026
Join WhatsApp Group
HomeStateಉಡುಪಿಗೆ ಬಂದ್ರು AI ಟೀಚರ್!

ಉಡುಪಿಗೆ ಬಂದ್ರು AI ಟೀಚರ್!

ಕುಂದಾಪುರ/ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಶಿಕ್ಷಣ ವಲಯದ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೀಗ ಹೊಸ ಸಂಚಲನ ಮೂಡಿದ್ದು, ‘ಐರಿಸ್’ ಎಂಬ ಎಐ ಆಧಾರಿತ ರೋಬೋಟ್ ಶಿಕ್ಷಕಿ ಯಶಸ್ವಿಯಾಗಿ ಬೋಧನೆ ಆರಂಭಿಸಿದ್ದಾಳೆ.

ರಾಜ್ಯದ ಸರ್ಕಾರಿ ಶಾಲೆಯೊಂದರಲ್ಲಿ ಇಂತಹ ಎಐ ಶಿಕ್ಷಕಿಯ ಅಳವಡಿಕೆ ಇದೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗಿದೆ.

ಕಳೆದ ಏಪ್ರಿಲ್ 11ರಂದು ಶಾಲೆಯಲ್ಲಿ ಈ ವಿನೂತನ ರೋಬೋಟ್ ಶಿಕ್ಷಕಿಯನ್ನು ಲೋಕಾರ್ಪಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಈಗ ಅದರೊಂದಿಗೆ ಸಂವಾದ ನಡೆಸುತ್ತಾ ಪಾಠ ಕಲಿಯುತ್ತಿದ್ದಾರೆ.

NITI Aayog ಸಂಸ್ಥೆಯ ‘ಅಟಲ್ ಟಿಂಕರಿಂಗ್ ಲ್ಯಾಬ್’ ಯೋಜನೆಯಡಿ Maker Labs Edutech ಸಂಸ್ಥೆ ಈ ‘ಐರಿಸ್’ ರೋಬೋಟ್ ಅನ್ನು ನಿರ್ಮಿಸಿದೆ.

ಸೀರೆಯಲ್ಲಿ ಕಾಣಿಸಿಕೊಳ್ಳುವ ಈ ಎಐ ಶಿಕ್ಷಕಿ ವಿದ್ಯಾರ್ಥಿಗಳೊಂದಿಗೆ ಮಾತನಾಡುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಕೈಕುಲುಕುವಂತಹ ಸಂವಾದಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

ವಿಶೇಷವಾಗಿ 20ಕ್ಕೂ ಹೆಚ್ಚು ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಮಾತನಾಡುವ ಸಾಮರ್ಥ್ಯ ಇದಕ್ಕೆ ಇರುವುದರಿಂದ, ವಿದ್ಯಾರ್ಥಿಗಳ ಕಲಿಕೆಯ ಅನುಭವ ಇನ್ನಷ್ಟು ಆಸಕ್ತಿದಾಯಕವಾಗಿದೆ.

ಸುಮಾರು ₹4 ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಈ ಎಐ ಶಿಕ್ಷಕಿ ಸಾಂಪ್ರದಾಯಿಕ ಶಿಕ್ಷಣಕ್ಕೆ ಹೊಸ ತಂತ್ರಜ್ಞಾನ ಸ್ಪರ್ಶ ನೀಡಿದ್ದು, ಗ್ರಾಮೀಣ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share