Saturday, October 24, 2026
HomeCrimeಅಂಕೋಲಾ | ಜೆಸಿಬಿಯಿಂದ ಮನೆ ಧ್ವಂಸ: ಮಹಿಳೆಗೆ ಬೆದರಿಕೆ, ಹಲ್ಲೆ

ಅಂಕೋಲಾ | ಜೆಸಿಬಿಯಿಂದ ಮನೆ ಧ್ವಂಸ: ಮಹಿಳೆಗೆ ಬೆದರಿಕೆ, ಹಲ್ಲೆ

ಅಂಕೋಲಾ: ಮನೆ ಅಗೆಯುವುದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ಎದೆಗೆ ಕೈ ಹಾಕಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿದ್ದು, ಜೆಸಿಬಿಯಿಂದ ಮನೆ ನೆಲಸಮಗೊಳಿಸಿ ಚಿನ್ನಾಭರಣ, ಹಣ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಮಾಡಿರುವ ಆರೋಪದಡಿ ಕುಮಟಾ ತಾಲೂಕಿನ ಅಳ್ವೆಕೋಡಿಯ ಜೈವಿಠಲ ಚಂದ್ರಕಾಂತ ಕುಬಾಲ ಸೇರಿ ಇನ್ನೂ ನಾಲ್ವರು ಹಾಗೂ ಇತರರ ವಿರುದ್ಧ ಗಾಬೀತಕೇಣಿಯ ಸವಿತಾ ಗಣಪತಿ ಜೋಶಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 64ಬಿ ಮನೆಯಲ್ಲಿ ವಾಸಿಸುತ್ತಿರುವ ಗಾಬೀತಕೇಣಿಯ ಸವಿತಾ ಗಣಪತಿ ಜೋಶಿ ಸೆ. 21ರಂದು ತಾಯಿಯೊಂದಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಆರೋಪಿತರು ಕೆಎ-30-ಎನ್-2301 ನೋಂದಣಿ ಸಂಖ್ಯೆಯ ಜೆಸಿಬಿ ಬಳಸಿ ಮನೆಯ ಬಳಿ ಅಗೆಯಲು ಆರಂಭಿಸಿದ್ದಾರೆ.

ಇದನ್ನು ಪ್ರಶ್ನಿಸಿದಾಗ, ಮೊದಲ ಆರೋಪಿ ಜೈವಿಠಲ ಚಂದ್ರಕಾಂತ ಕುಬಾಲ ಎಂಬಾತ ಅವಾಚ್ಯವಾಗಿ ನಿಂದಿಸಿ, ಬಟ್ಟೆ ಬಿಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಉಳಿದ ಆರೋಪಿತರೂ ಬಟ್ಟೆ ಬಿಚ್ಚಿಸಿ ಕಳುಹಿಸುವುದಾಗಿ ಹೇಳಿದ್ದು, ಜೈವಿಠಲ ಕುಬಾಲ ಎದೆಗೆ ಕೈ ಹಾಕಿ ಮಾನಕ್ಕೆ ಕುಂದುಂಟು ಮಾಡುವ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ನಂತರ ಆರೋಪಿತರೆಲ್ಲರೂ ಸೇರಿ ಜೆಸಿಬಿಯಿಂದ ಮನೆಯನ್ನು ಕೆಡವಿ ನೆಲಸಮಗೊಳಿಸಿದ್ದು, ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಮಾಡಿ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುಮಟಾ ತಾಲೂಕಿನ ಅಳ್ವೆಕೋಡಿಯ ಜೈವಿಠಲ ಚಂದ್ರಕಾಂತ ಕುಬಾಲ, ಅಂಕೋಲಾದ ಉಪೇಂದ್ರ ನಾಯ್ಕ, ವಿಶ್ವನಾಥ ನಾಯ್ಕ, ಗಣೇಶ ನಾಯ್ಕ ಹಾಗೂ ವಿನಾಯಕ ಗಜಾನನ ಶೆಟ್ಟಿ ಸೇರಿದಂತೆ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸವಿತಾ ಪೊಲೀಸರಿಗೆ ಮನವಿ ಮಾಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share