ಕಾರವಾರ: ಹೆಸ್ಕಾಂನ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಆ.19ರಂದು ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹೊನ್ನಾವರ ಪಟ್ಟಣ ಶಾಖೆಯ ಬಂದರು ರೋಡ್ ಫೀಡರ್ನ 11 ಕೆ.ವಿ ಮಾರ್ಗದ ನಿರ್ವಹಣೆ ಹಾಗೂ ಗೇರುಸೊಪ್ಪ ಶಾಖೆಯ ರೈಟ್ ಮತ್ತು ಮಾಂಗೋಡ್ ಫೀಡರ್ಗಳ 11 ಕೆ.ವಿ ಮಾರ್ಗದ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಆ.19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕುಮಟಾ ನಗರದ 11 ಕೆ.ವಿ ಕುಮಟಾ ಟೌನ್ ಮತ್ತು 11 ಕೆ.ವಿ ಚಿತ್ರಿಗಿ ಹಾಗೂ ಗ್ರಾಮೀಣ ಶಾಖೆಯ 11 ಕೆ.ವಿ ಧಾರೇಶ್ವರ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾಮಗಾರಿಗಳಿಗೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಮತ್ತು ಕುಮಟಾ ಹೆಸ್ಕಾಂ ಉಪವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.