Thursday, October 22, 2026
HomeLocal Newsರಂಗೋಲಿಯಲ್ಲಿ ಅನಂತ್ ನಾಗ್; ವಿಶೇಷ ಗೌರವ ಸಲ್ಲಿಸಿದ ಗಣೇಶ ಖರೆ

ರಂಗೋಲಿಯಲ್ಲಿ ಅನಂತ್ ನಾಗ್; ವಿಶೇಷ ಗೌರವ ಸಲ್ಲಿಸಿದ ಗಣೇಶ ಖರೆ

ಬನವಾಸಿ: ಉತ್ತರ ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದ ಕಲಾವಿದನೊಬ್ಬ, ಇದೇ ಜಿಲ್ಲೆಯ ಹೆಮ್ಮೆಯ ನಟನಿಗೆ ತನ್ನ ಕಲೆಯ ಮೂಲಕ ಗೌರವ ಸಲ್ಲಿಸಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಟ ಅನಂತ್ ನಾಗ್ ಅವರ ಭಾವಚಿತ್ರವನ್ನು ಬನವಾಸಿಯ ಕಲಾವಿದ ಗಣೇಶ ಖರೆ ಅವರು ರಂಗೋಲಿಯಲ್ಲಿ ಬಿಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಹಲವು ದಶಕಗಳಿಂದ ಪ್ರೇಕ್ಷಕರ ಮನಗೆದ್ದಿರುವ ಅನಂತ್ ನಾಗ್ ಅವರಿಗೆ ದೇಶದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಸಂಭ್ರಮಕ್ಕೆ ತಮ್ಮ ಕಲೆಯನ್ನು ಜೋಡಿಸಿರುವ ಗಣೇಶ ಖರೆ, ರಂಗೋಲಿಯಲ್ಲಿ ಅನಂತ್ ನಾಗ್ ಅವರ ಸುಂದರ ಭಾವಚಿತ್ರವನ್ನು ಮೂಡಿಸುವ ಮೂಲಕ ಗೌರವ ಸಮರ್ಪಿಸಿದ್ದಾರೆ.

ಸಾಧಕರನ್ನು ತಮ್ಮ ಕಲೆಯ ಮೂಲಕ ಗೌರವಿಸುತ್ತಾ ಬಂದಿರುವ ಗಣೇಶ ಖರೆ ಅವರ ಈ ಪ್ರಯತ್ನ ಕಲಾಭಿಮಾನಿಗಳ ಗಮನ ಸೆಳೆದಿದೆ. ರಂಗೋಲಿಯಲ್ಲಿ ಮೂಡಿದ ಅನಂತ್ ನಾಗ್ ಅವರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಉತ್ತರ ಕನ್ನಡದ ಕಲಾವಿದನ ಈ ವಿಶೇಷ ಅಭಿನಂದನೆ ಗಮನ ಸೆಳೆದಿದೆ.

ಬನವಾಸಿ ಮೂಲದ ಗಣೇಶ್ ಖರೆ ಅವರು ರಂಗೋಲಿ ಕಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಕಲಾವಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವರಿಗೆ ವಿಶೇಷ ಆಹ್ವಾನ ದೊರಕಿತ್ತು. ಇದು ಬನವಾಸಿ ಹಾಗೂ ಉತ್ತರ ಕನ್ನಡದ ಹೆಮ್ಮೆಯ ಸಂಗತಿಯಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share