Saturday, June 13, 2026
HomeLocal Newsಮೂಲಭೂತ ಸೌಕರ್ಯ ವಂಚಿತರ ಧ್ವನಿಯಾಗುತ್ತೇವೆ: ಬಿಜೆಪಿ ಭರವಸೆ

ಮೂಲಭೂತ ಸೌಕರ್ಯ ವಂಚಿತರ ಧ್ವನಿಯಾಗುತ್ತೇವೆ: ಬಿಜೆಪಿ ಭರವಸೆ

ಯಲ್ಲಾಪುರ: ನಗರದ ಕಾಳಮ್ಮ ನಗರ ಪ್ರದೇಶದಲ್ಲಿನ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ನಿವಾಸಿಗಳೊಂದಿಗೆ ಬಿಜೆಪಿ ಮುಖಂಡರು ಚರ್ಚೆ ನಡೆಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರು, ಕಾಳಮ್ಮ ನಗರದ ನಿವಾಸಿಗಳು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆಯನ್ನು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿ ಧ್ವನಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಮಂಡಲ ಕಾರ್ಯದರ್ಶಿ ಪ್ರದೀಪ್ ಯಲ್ಲಾಪುರಕರ, ಹಿರಿಯ ವಕೀಲ ಹಾಗೂ ಪಕ್ಷದ ಸದಸ್ಯ ಗಣೇಶ ಪಾಟಣಕರ, ಬೂತ್ ಅಧ್ಯಕ್ಷ ತುಳಸಿದಾಸ ನಾಯ್ಕ ಹಾಗೂ ಪಕ್ಷದ ಸದಸ್ಯರಾದ ಶ್ಯಾಮ ಆಚಾರಿ ಮತ್ತು ಸತೀಶ್ ರೇವಣಕರ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share