ಮುಂಡಗೋಡ: ಹೊಸದಾಗಿ ರಸ್ತೆ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಗಟ್ಟಿಯಾಗುವವರೆಗೂ ಯಾರೂ ಸಂಚರಿಸಬಾರದೆಂದು ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ಟ್ರಾಲಿಯನ್ನು ನಿಲ್ಲಿಸಿದ್ದರೂ ಉದ್ದೇಶಪೂರ್ವಕವಾಗಿ ಬೈಕ್ ಓಡಿಸಿಕೊಂಡು ಬಂದ ವ್ಯಕ್ತಿಯ ಮೇಲೆ ದೂರು ದಾಖಲಾಗಿದೆ.
ಫೆ. 9ರ ಸಾಯಂಕಾಲ 5 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ತೆಗ್ಗಿನಕೊಪ್ಪ ಗ್ರಾಮದಿಂದ ಲಾಮಾ ಕ್ಯಾಂಪ್ ನಂ-1ರವರೆಗೆ ಲಂಬಾಣಿ ಅಭಿವೃದ್ಧಿ ನಿಗಮದಿಂದ ಮಂಜೂರಿಯಾದ ಕಾಂಕ್ರೀಟ್ ರಸ್ತೆಯನ್ನು ಅನಿಲಕುಮಾರ ಆದು ರಾಠೋಡ ಅವರು ಅಗತ್ಯ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಕೆಲಸಗಾರರೊಂದಿಗೆ ಕಾಮಗಾರಿ ಕೈಗೊಂಡಿದ್ದರು. ಸದರಿ ರಸ್ತೆಯು ಗಟ್ಟಿಯಾಗುವರೆಗೂ ರಸ್ತೆಯ ಪ್ರಾರಂಭದಲ್ಲಿ ರಸ್ತೆಯ ಮೇಲೆ ಯಾರೂ ಓಡಾಡದಂತೆ ಅಡ್ಡಲಾಗಿ ಟ್ರ್ಯಾಕ್ಟರ್ ಟ್ರಾಲಿ ನಿಲ್ಲಿಸಿದ್ದರು. ಹೀಗಿದ್ದರೂ ಸಹ ಸಾರ್ವಜನಿಕ ರಸ್ತೆಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿ ತೆಗ್ಗಿನಕೊಪ್ಪದ ವಿನೋದ ಮೋಹನ ರಾಠೋಡ ಹಸಿ ಕಾಂಕ್ರೀಟ್ ರಸ್ತೆಯಲ್ಲಿ ತನ್ನ ಬೈಕ್ ಚಲಾಯಿಸಿ ರಸ್ತೆಯನ್ನು ಹಾಳು ಮಾಡಿದ್ದಲ್ಲದೆ, ದೂರುದಾರರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು `ನೀವು ಮಾಡುತ್ತಿರುವ ಕಾಂಕ್ರೀಟ್ ರಸ್ತೆಯ ಕಾಮಗಾರಿ ಕಳಪೆ ಮಟ್ಟದಾಗಿದೆ’ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರು ದಾಖಲಾಗಿದೆ.
ಕಾಂಕ್ರೀಟ್ ರಸ್ತೆ ಹಾಳುಗೆಡವಿದವನ ಮೇಲೆ ದೂರು!
RELATED ARTICLES