Friday, March 13, 2026
HomeStateಐಫೋನ್‌ ಕದಿಯಲು ವಿಮಾನದಲ್ಲಿ ಬರುತ್ತಿದ್ದರು!

ಐಫೋನ್‌ ಕದಿಯಲು ವಿಮಾನದಲ್ಲಿ ಬರುತ್ತಿದ್ದರು!

ಬೆಂಗಳೂರು: ಕೇವಲ ಐ-ಫೋನ್‌ಗಳನ್ನು ಗುರಿಯಾಗಿಸಿಕೊಂಡು, ವಿಮಾನದ ಮೂಲಕ ನಗರಕ್ಕೆ ಬಂದು ಕಳ್ಳತನ ಮಾಡುತ್ತಿದ್ದ ದೆಹಲಿ ಮೂಲದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ಕಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಜಯಚಂದ್ ಮತ್ತು ತರುಣ್ ಬಂಧಿತ ಆರೋಪಿಗಳು. ಇವರು ಕೇವಲ ಮೊಬೈಲ್ ಕಳ್ಳತನ ಮಾಡಲೆಂದೇ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದರು. ಅಲ್ಲಿಂದ ಕ್ಯಾಬ್ ಬಾಡಿಗೆಗೆ ಪಡೆದು ನಗರದಾದ್ಯಂತ ಸಂಚರಿಸುತ್ತಿದ್ದರು.

ಈ ಕಳ್ಳರು ಸಾಮಾನ್ಯ ಮೊಬೈಲ್‌ಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕೇವಲ ದುಬಾರಿ ಬೆಲೆಯ ಐ-ಫೋನ್‌ಗಳನ್ನು ಹೊಂದಿರುವವರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು.ನಗರದ ಐಷಾರಾಮಿ ಹೋಟೆಲ್‌ಗಳಲ್ಲಿ ನ ಡೆಯುವ ಪಾರ್ಟಿಗಳು ಹಾಗೂ ದೇವನಹಳ್ಳಿ ಸುತ್ತಮುತ್ತ ನಡೆಯುವ ದೊಡ್ಡ ಮಟ್ಟದ ಸಂಗೀತ ಕಾರ್ಯಕ್ರಮಗಳಲ್ಲಿ ಸಾಮಾನ್ಯರಂತೆಯೇ ಭಾಗವಹಿಸಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಅಪಹರಿಸುತ್ತಿದ್ದರು.

​ ಕೇವಲ ಪಾರ್ಟಿಗಳಲ್ಲದೆ, ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸಿ ಸಹ-ಪ್ರಯಾಣಿಕರ ಬೆಲೆಬಾಳುವ ಫೋನ್‌ಗಳನ್ನು ಎಗರಿಸುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share