Saturday, May 30, 2026
HomeCrimeಬಚ್ಚಲುಮನೆಯಲ್ಲಿ ವಿದ್ಯುತ್ ಸ್ಪರ್ಶ: 5 ವರ್ಷದ ಬಾಲಕಿ ದುರಂತ ಅಂತ್ಯ

ಬಚ್ಚಲುಮನೆಯಲ್ಲಿ ವಿದ್ಯುತ್ ಸ್ಪರ್ಶ: 5 ವರ್ಷದ ಬಾಲಕಿ ದುರಂತ ಅಂತ್ಯ

ಹೊನ್ನಾವರ: ಕೈ ತೊಳೆಯಲು ಬಚ್ಚಲುಮನೆಗೆ ಹೋಗಿದ್ದ ಐದು ವರ್ಷದ ಬಾಲಕಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿರುವ ದುರ್ಘಟನೆ ಹೊನ್ನಾವರ ತಾಲೂಕಿನ ಮಂಕಿ ಸಮೀಪದ ಹೊಸಪಟ್ಟಣದಲ್ಲಿ ನಡೆದಿದೆ.

ಮಂಕಿ ಬಳಿ ಹೊಸಪಟ್ಟಣ ನಿವಾಸಿ ಹರೀಶ ನಾಯ್ಕ ಅವರ ಪುತ್ರಿ ಆಶಿಕಾ ನಾಯ್ಕ (5) ಮೃತಪಟ್ಟ ಬಾಲಕಿ. ಏಪ್ರಿಲ್ 30ರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಬಚ್ಚಲುಮನೆಯಲ್ಲಿ ಪಂಪ್‌ಸೆಟ್ ಅಳವಡಿಸಲಾಗಿದ್ದು, ಅದಕ್ಕೆ ಸಂಪರ್ಕಿಸಿದ್ದ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಈ ವಿಷಯ ತಿಳಿಯದೇ ಆಶಿಕಾ ಕೈ ತೊಳೆಯಲು ಅಲ್ಲಿಗೆ ಹೋಗಿದ್ದಾಗ, ಬಿದ್ದಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ ಪರಿಣಾಮವಾಗಿ ವಿದ್ಯುತ್ ಸ್ಪರ್ಶವಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ತೀವ್ರವಾಗಿ ಅಸ್ವಸ್ಥಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸುಬ್ರಹ್ಮಣ್ಯ ಅಶೋಕ ನಾಯ್ಕ ಮಾಹಿತಿ ನೀಡಿದ್ದು, ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share