Saturday, May 30, 2026
HomeNationalಅಪ್ರಾಪ್ತ ಬಾಲಕಿಯರ ಶೋಷಣೆ ಆರೋಪ; ಬಿಜೆಪಿ ಮುಖಂಡನ ಪುತ್ರ ಬಂಧನ

ಅಪ್ರಾಪ್ತ ಬಾಲಕಿಯರ ಶೋಷಣೆ ಆರೋಪ; ಬಿಜೆಪಿ ಮುಖಂಡನ ಪುತ್ರ ಬಂಧನ

ಗೋವಾ: ಕರ್ನಾಟಕದ ಪ್ರಜ್ವಲ್ ರೇವಣ್ಣ ಪ್ರಕರಣದಂತೆಯೇ ಇದೀಗ ಗೋವಾದಲ್ಲೂ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಮುಖಂಡನ ಪುತ್ರನೊಬ್ಬ ಅಪ್ರಾಪ್ತ ಬಾಲಕಿಯರನ್ನು ಶೋಷಣೆ ಮಾಡಿದ್ದಾನೆ ಎಂಬ ಆರೋಪದ ಮೇರೆಗೆ ಬಂಧಿಸಲಾಗಿದೆ.

ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಪುತ್ರ 20 ವರ್ಷದ ಸೋಹಮ್ ನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕಳೆದ ಮೂರು ವರ್ಷಗಳಿಂದ ಸುಮಾರು 25ರಿಂದ 30 ಅಪ್ರಾಪ್ತ ಬಾಲಕಿಯರನ್ನು ಬೆದರಿಸಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮದ್ಯದ ನಶೆಯಲ್ಲಿ ತನ್ನ ಗೆಳೆಯರಿಗೆ ಕೆಲವು ವಿಡಿಯೋಗಳನ್ನು ಕಳುಹಿಸಿದ್ದರಿಂದ ಈ ಪ್ರಕರಣ ಬಹಿರಂಗವಾಗಿದೆ. ನಂತರ ಆ ವಿಡಿಯೋಗಳು ವಾಟ್ಸಪ್‌ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತ್ತಲ್ಲದೆ, ಸ್ಥಳೀಯವಾಗಿ ಪ್ರತಿಭಟನೆಗಳೂ ನಡೆದಿವೆ.

ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಿ, ಅವನ ಮೊಬೈಲ್‌ ಫೋನ್ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ POCSO Act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share