Friday, March 13, 2026
HomeCrimeಡ್ರ*ಗ್ಸ್‌ ಸಾಗಾಟ; ಐವರು ವಶಕ್ಕೆ

ಡ್ರ*ಗ್ಸ್‌ ಸಾಗಾಟ; ಐವರು ವಶಕ್ಕೆ

ಹಾಸನ: ನಗರದಲ್ಲಿ ಮಾದಕ ವಸ್ತುಗಳ ದಂಧೆ ನಡೆಸಲು ಪ್ರಯತ್ನ ನಡೆಸಿದ್ದ ಐವರನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ನಡೆದ ತಪಾಸಣೆಯ ಸಂದರ್ಭದಲ್ಲಿ ಎಂಡಿಎಂಎ ಡ್ರಗ್ಸ್ ಸಾಗಾಟ ಪತ್ತೆಯಾಗಿದೆ. ಬಂಧಿತರನ್ನು ಪರ್ವೀಜ್, ಸುಹೇಲ್, ಅಬ್ದುಲ್ ಯಾಸಿನ್, ಇಬ್ರತ್ ಖಾನ್ ಹಾಗೂ ಸೈಯದ್ ಯೂಸಫ್ ಎಂದು ಗುರುತಿಸಲಾಗಿದೆ.
ಇವರಲ್ಲಿ ನಾಲ್ವರು ಶಿವಮೊಗ್ಗ ಮೂಲದವರಾಗಿದ್ದು, ಇನ್ನೋರ್ವ ಹಾಸನ ಮೂಲದವನು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಸದರಿ ಭಾಗದಲ್ಲಿ ಕಾರ್‌ ಒಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಅದನ್ನು ತಡೆದು ಪರಿಶೀಲಿಸಿದ ಪೊಲೀಸರಿಗೆ ಕಾರಿನೊಳಗೆ ಸುಮಾರು ರೂ. 2 ಲಕ್ಷಕ್ಕೂ ಅಧಿಕ ಮೌಲ್ಯದ 40 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ತಕ್ಷಣವೇ ಕಾರು ಹಾಗೂ ಡ್ರಗ್ಸ್ ವಶಕ್ಕೆ ಪಡೆದು ಐವರನ್ನೂ ಬಂಧಿಸಲಾಗಿದೆ.
ಪೆನ್‌ಮೊಹಲ್ಲಾ ಸಿಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ಪಿಎಸ್‌ಐ ರವಿಶಂಕರ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್ ಮತ್ತು ದಿಲೀಪ್ ಕಾರ್ಯಾಚರಣೆಯಲ್ಲಿದ್ದರು. ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದ್ದು, ಈ ಜಾಲದ ಹಿಂದಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share