Ad
Ad
Ad
Home Crime ಹೊನ್ನಾವರ | ಬೋಟಿಂಗ್‌ ವಿಚಾರ ಪ್ರಶ್ನಿಸಿದ್ದಕ್ಕೆ ದಂಪತಿಗೆ ಧಮಕಿ

ಹೊನ್ನಾವರ | ಬೋಟಿಂಗ್‌ ವಿಚಾರ ಪ್ರಶ್ನಿಸಿದ್ದಕ್ಕೆ ದಂಪತಿಗೆ ಧಮಕಿ

0
8

ಹೊನ್ನಾವರ: ಬೋಟಿಂಗ್‌ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ದಂಪತಿಯನ್ನು ಟಿ.ಟಿ. ವಾಹನದಿಂದ ಅಡ್ಡಗಟ್ಟಿ, ವಾಹನವನ್ನು ಅವರ ಮೇಲೆ ಹಾಯಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿನಗರದ ನಿವಾಸಿ ಇದಲಿನ್ ಫ್ರಾನ್ಸಿಸ್ ಹೊರ್ಟಾ (42) ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಪತಿ ಸ್ಟೀಫನ್ ಅವರೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಹೊನ್ನಾವರದಿಂದ ಮಾವಿನಕುರ್ವಾ ಗ್ರಾಮದತ್ತ ತೆರಳುತ್ತಿದ್ದರು. ಸಂಜೆ ಸುಮಾರು 4.30ರ ವೇಳೆಗೆ ಮಾವಿನಕುರ್ವಾ ಗ್ರಾಮದ ಅಣ್ಣಪ್ಪ ಪ್ರೊವಿಜನ್ ಸ್ಟೋರ್‌ ಬಳಿ ತಲುಪಿದಾಗ, ಅವರ ಮುಂದಿನಿಂದ ಬರುತ್ತಿದ್ದ ಕೆಎ-05/ಎಜಿ-0008 ನೋಂದಣಿ ಸಂಖ್ಯೆಯ ಟಿ.ಟಿ. ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.

ವಾಹನ ನಿಂತಿದ್ದರಿಂದ ಮುಂದೆ ಸಾಗಲು ತೊಂದರೆಯಾದ ಹಿನ್ನೆಲೆಯಲ್ಲಿ ದೂರುದಾರರು ಕೆಳಗಿಳಿದು ಚಾಲಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ಮಾವಿನಕುರ್ವಾದ ಆನಂದ ಗೌಡ ಹಾಗೂ ರಮೇಶ ಗಣಪಯ್ಯ ಗೌಡ ಅವರು ಬೋಟಿಂಗ್‌ಗೆ ಜನರನ್ನು ಕರೆಸಿದ್ದರಿಂದ ತಾನು ಬಂದಿರುವುದಾಗಿ ಚಾಲಕ, ಅಪ್ಸರಕೊಂಡದ ಗಜೇಂದ್ರ ತಿಮ್ಮಪ್ಪ ಗೌಡ ತಿಳಿಸಿದ್ದಾನೆ ಎನ್ನಲಾಗಿದೆ.

ಬಳಿಕ ಟಿ.ಟಿ. ವಾಹನದಲ್ಲಿದ್ದ ಪ್ರವಾಸಿಗರನ್ನು ಇಳಿಸುತ್ತಿರುವುದನ್ನು ಗಮನಿಸಿದ ದೂರುದಾರರು, ಬೋಟಿಂಗ್‌ಗೆ ನಿಷೇಧವಿದ್ದರೂ ಇಲ್ಲಿ ಕಾನೂನುಬಾಹಿರವಾಗಿ ಬೋಟಿಂಗ್ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗಜೇಂದ್ರ ಗೌಡ ಸಿಟ್ಟುಗೊಂಡು ದಂಪತಿಯನ್ನು ತಡೆದು, ಟಿ.ಟಿ. ವಾಹನವನ್ನು ಅವರ ಮೇಲೆ ಹಾಯಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!