Friday, October 23, 2026
HomeCrimeಜಾನುವಾರು ಕಳ್ಳತನ ಶಂಕೆ; ಪ್ರಕರಣ ದಾಖಲು

ಜಾನುವಾರು ಕಳ್ಳತನ ಶಂಕೆ; ಪ್ರಕರಣ ದಾಖಲು

ಹೊನ್ನಾವರ: ಕಳ್ಳತನ ಮಾಡಿ ತಂದಿರುವ ಅನುಮಾನವಿರುವ ಏಳು ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡಲು ಅಥವಾ ಕಸಾಯಿಖಾನೆಗೆ ಸಾಗಿಸಲು ಉದ್ದೇಶಿಸಿದ್ದ ಆರೋಪದಡಿ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊನ್ನಾವರ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಾನಂದ ಅವರು ನೀಡಿದ ದೂರಿನ ಆಧಾರದ ಮೇಲೆ ಮುಸ್ಲಿಂಕೇರಿ ಹೆರಂಗಡಿ ನಿವಾಸಿ ಜೈನಲ್ ಅಬಿದಿನ್ ಅಹಮ್ಮದ್ ಕಾಟಾಪರಶು ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿತನ ಮನೆಯ ಕಂಪೌಂಡ್‌ನಲ್ಲಿ ಕಂದು ಬಣ್ಣದ ಒಂದು ಹೋರಿ, ಕಪ್ಪು ಬಣ್ಣದ ಒಂದು ಆಕಳು, ಕಪ್ಪು–ಬಿಳಿ ಬಣ್ಣದ ಮೂರು ಹೋರಿಗಳು ಹಾಗೂ ಕಪ್ಪು ಬಣ್ಣದ ಒಂದು ಹೋರಿ ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ಕಟ್ಟಿಹಾಕಿರುವುದು ಕಂಡುಬಂದಿದ್ದು, ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ರೂ.20,500 ಎಂದು ದಾಖಲಿಸಲಾಗಿದೆ.

ಈ ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು, ವಧೆ ಮಾಡಿ ಮಾಂಸ ಮಾರಾಟ ಮಾಡಲು ಅಥವಾ ಯಾವುದಾದರೂ ಕಸಾಯಿಖಾನೆಗೆ ಸಾಗಾಟ ಮಾಡುವ ಉದ್ದೇಶದಿಂದ ಕಂಪೌಂಡ್‌ನಲ್ಲಿ ಕಟ್ಟಿಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share