Friday, July 24, 2026
Join WhatsApp Group
HomeStateಹುಬ್ಬಳ್ಳಿಯಲ್ಲಿ ಉದ್ವಿಗ್ನತೆ: ‘ಲವ್ ಜಿಹಾದ್’ ಹೊತ್ತಿಸಿದ ಕಿಡಿ

ಹುಬ್ಬಳ್ಳಿಯಲ್ಲಿ ಉದ್ವಿಗ್ನತೆ: ‘ಲವ್ ಜಿಹಾದ್’ ಹೊತ್ತಿಸಿದ ಕಿಡಿ

ಹುಬ್ಬಳ್ಳಿ: ನಗರದಲ್ಲಿ ‘ಲವ್ ಜಿಹಾದ್’ ಆರೋಪದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ವರದಿಯಾಗಿವೆ.

ಹುಬ್ಬಳ್ಳಿ ನಗರದ ವಿಜಯನಗರ ಪ್ರದೇಶದ ಜಿಮ್ ಟ್ರೈನರ್ ಸಮೀರ್ ಮನೆಗೆ ಹಿಂದೂ ಪರ ಸಂಘಟನೆಗಳ ಸದಸ್ಯರು ನುಗ್ಗಿ, ಆರೋಪಿಯನ್ನು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು.

ಈ ನಡುವೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಯುವತಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಸಮೀರ್ ಜ್ಯೂಸ್‌ನಲ್ಲಿ ಮತ್ತಿನ ಔಷಧಿ ಬೆರೆಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ಸಂತ್ರಸ್ತೆ ದೂರಿದ್ದಾರೆ.

ಮಾಹಿತಿಯ ಪ್ರಕಾರ, ಸಮೀರ್ ಮತ್ತು ಹಿಂದೂ ಯುವತಿ ಜಿಮ್‌ನಲ್ಲಿ ಪರಿಚಯವಾಗಿದ್ದು, ನಂತರ ಸ್ನೇಹ ಬೆಳೆದಿತ್ತು. ಬಳಿಕ ಯುವತಿಯನ್ನು ಮನೆಗೆ ಕರೆಯಿಸಿಕೊಂಡು, ಮತ್ತಿನ ಔಷಧಿ ಬೆರೆಸಿದ ಪಾನೀಯ ನೀಡಿದ ನಂತರ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.

ಆರೋಪಿಯ ಮೊಬೈಲ್‌ನಲ್ಲಿ ಹಲವು ಯುವತಿಯರ ಫೋಟೋಗಳು, ಗರ್ಭನಿರೋಧಕ ಮಾತ್ರೆಗಳ ಚಿತ್ರಗಳು ಹಾಗೂ ಸ್ಕ್ಯಾನಿಂಗ್ ರಿಪೋರ್ಟ್‌ಗಳು ಪತ್ತೆಯಾಗಿವೆ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ.

ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಸಮೀರ್‌ನ ಅಕ್ಕ ತೈಸೀಮ್ ಮುಲ್ಲಾ ಮೂಲಕ ಪರಿಚಯವಾಗಿದ್ದು, ಸ್ನೇಹದ ನೆಪದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. “ಒಂದು ದಿನ ಮನೆಗೆ ಕರೆದುಕೊಂಡು ಹೋಗಿ, ಜ್ಯೂಸ್‌ನಲ್ಲಿ ಮತ್ತಿನ ಔಷಧಿ ನೀಡಿ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದು, ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಕಟ್ಟು ನಿಟ್ಟುಗೊಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share