Friday, October 23, 2026
HomeLocal Newsಶಾಸಕರ ಕಣ್ಣೊರೆಸುವ ನಾಟಕಕ್ಕೆ ಜನ ಮರುಳಾಗುವುದಿಲ್ಲ!

ಶಾಸಕರ ಕಣ್ಣೊರೆಸುವ ನಾಟಕಕ್ಕೆ ಜನ ಮರುಳಾಗುವುದಿಲ್ಲ!

ಅರ್ಧಂಬರ್ಧ ಆದೇಶವನ್ನು ನಂಬಲು ಜಿಲ್ಲೆಯ ಜನರೇನೂ ಮೂರ್ಖರಲ್ಲ; ಸಂಸದ ಕಾಗೇರಿ

ಶಿರಸಿ: ಗ್ರಾಮೀಣ ಭಾಗದ ಬಡವರ ಆಸ್ತಿ ಹಕ್ಕಿಗೆ ಧಕ್ಕೆ ತರುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಆಗಸ್ಟ್ 13ರಂದು ಹೊರಡಿಸಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿರುವುದು ಜನರ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ಶೋಷಣೆಯ ಭಾಗವಾಗಿ, ಗ್ರಾಮೀಣ ಭಾಗದ ಬಡವರ ಸೂರನ್ನೇ ಕಸಿದುಕೊಳ್ಳುವ ದುರುದ್ದೇಶದಿಂದ ಹೊರಡಿಸಲಾಗಿದ್ದ ಆಗಸ್ಟ್ 13ರ ಜನವಿರೋಧಿ ಆದೇಶವು ಬಡವರ ಪಾಲಿಗೆ ಕಂಟಕವಾಗಿತ್ತು.

ಮನೆ ನಂಬರ್ ತಂತ್ರಾಂಶ ಹಾಗೂ ಇ-ಸ್ವತ್ತು 2.0 ವ್ಯವಸ್ಥೆಯ ನೆಪದಲ್ಲಿ ಸಾವಿರಾರು ಬಡ ಕುಟುಂಬಗಳನ್ನು ಆಸ್ತಿ ಹಕ್ಕಿನಿಂದ ವಂಚಿಸಲು ಸರ್ಕಾರ ಸಂಚು ರೂಪಿಸಿತ್ತು. ​ಈ ಕರಾಳ ನಡೆಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜನರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡ ಬೃಹತ್ ಹೋರಾಟ ಮತ್ತು ಜನರ ಜ್ವಾಲೆಯಂತಹ ಆಕ್ರೋಶಕ್ಕೆ ಬೆಚ್ಚಿಬಿದ್ದ ಆಡಳಿತ ಪಕ್ಷ, ತಕ್ಷಣಕ್ಕೆ ‘ಮನೆ ನಂಬರ್’ ರದ್ದು ಪ್ರಕ್ರಿಯೆಗೆ ಕೇವಲ ತಾತ್ಕಾಲಿಕ ತಡೆಯನ್ನಷ್ಟೇ ನೀಡಿದೆ.

ಇದು ಕೇವಲ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಷ್ಟೇ. ​ಮುಂಬರುವ ಪಂಚಾಯತ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಶಾಸನಬದ್ಧವಾಗಿ ಕಾಯ್ದೆಗೆ ಯಾವುದೇ ತಿದ್ದುಪಡಿ ತರದೆ ಹೊರಡಿಸಿರುವ ಈ ಅರ್ಧಂಬರ್ಧ ಆದೇಶವನ್ನು ನಂಬಲು ಜಿಲ್ಲೆಯ ಜನರೇನೂ ಮೂರ್ಖರಲ್ಲ.

ಸರ್ಕಾರದ ಈ ಚಾಲಾಕಿ ನಡೆ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಾಟಕವನ್ನು ಜನರು ಸ್ಪಷ್ಟವಾಗಿ ಅರ್ಥೈಸಿಕೊಂಡಿದ್ದಾರೆ. ​ಈ ಅರ್ಧಂಬರ್ಧ ಆದೇಶವು ಬಡವರ ಪರವಾಗಿ ಧ್ವನಿಯೆತ್ತಿದ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಜನತೆಯ ಅಭೂತಪೂರ್ವ ಹೋರಾಟ ಮತ್ತು ಬಿಜೆಪಿಯ ಸಂಘಟಿತ ಆಕ್ರೋಶಕ್ಕೆ ಸಂದ ಪ್ರಥಮ ತಾತ್ಕಾಲಿಕ ಜಯವಾಗಿದೆ.

ಸರ್ಕಾರಕ್ಕೆ ಪ್ರಾಮಾಣಿಕ ಬದ್ಧತೆ ಇದ್ದರೆ ತಕ್ಷಣವೇ ಕಾಯ್ದೆಗೆ ಕಾನೂನುಬದ್ಧ ತಿದ್ದುಪಡಿ ತಂದು ಬಡವರ ಮನೆ ಮತ್ತು ಆಸ್ತಿಗಳಿಗೆ ಶಾಶ್ವತ ಭದ್ರತೆ ನೀಡಬೇಕು. ಅಲ್ಲಿಯವರೆಗೆ ಜಿಲ್ಲೆಯ ಜನತೆಯ ಜೊತೆಗೂಡಿ ನಮ್ಮ ಈ ಪ್ರಜಾಸತ್ತಾತ್ಮಕ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share