ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ, ದಾಂಡೇಲಿ ನಗರಸಭೆ, ಹಳಿಯಾಳ ಪುರಸಭೆ, ಕಾರವಾರ ನಗರಸಭೆ, ಮಂಕಿ ಪಟ್ಟಣ ಪಂಚಾಯತ, ಶಿರಸಿ ನಗರಸಭೆ ಸೇರಿದಂತೆ 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 10 ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳುವ ಅವಶ್ಯಕತೆ ಇದ್ದು, ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಉದ್ದೇಶಿಸಿದ್ದು, ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವೆಬ್ಸೈಟ್: https://www.karnatakaone.gov.in/Public/FranchiseeTerms ಮೂಲಕ ಮಾರ್ಚ 2ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಸೀಲ್ದಾರ ಕಚೇರಿಯನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.