Friday, October 23, 2026
HomeCrimeಕುಮಟಾ | ಐನಾತಿ ಕಳ್ಳರಿಗೆ ಸಿಕ್ಕಿದ್ದು ಬರೇ 100 ರೂ!

ಕುಮಟಾ | ಐನಾತಿ ಕಳ್ಳರಿಗೆ ಸಿಕ್ಕಿದ್ದು ಬರೇ 100 ರೂ!

ಕುಮಟಾ: ಎಲೆಕ್ಟ್ರಿಕಲ್ಸ್‌ ಅಂಗಡಿಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಗದು ಹಾಗೂ ಹಳೆಯ ತಾಮ್ರದ ತಂತಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕುಮಟಾ ಪಟ್ಟಣದ ನೆಲ್ಲಿಕೇರಿಯಲ್ಲಿ ನಡೆದಿದೆ.

ಸೆ.24ರ ರಾತ್ರಿ 8 ಗಂಟೆಯಿಂದ ಸೆ.25ರ ಬೆಳಿಗ್ಗೆ 6.30ರ ನಡುವಿನ ಅವಧಿಯಲ್ಲಿ ನೆಲ್ಲಿಕೇರಿ ಟೆಂಪೋ ಸ್ಟ್ಯಾಂಡ್ ಬಳಿ ಇರುವ ‘ಶ್ರೀ ಗಣೇಶ ಎಲೆಕ್ಟ್ರಿಕಲ್ಸ್’ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಗಲ್ಲಾಪೆಟ್ಟಿಗೆ ಮುರಿದು ಅದರಲ್ಲಿದ್ದ ರೂ.100 ನಗದು ಹಾಗೂ ಸುಮಾರು 20 ಕೆ.ಜಿ. ತೂಕದ ಹಳೆಯ ತಾಮ್ರದ ತಂತಿಗಳನ್ನು ಚೀಲದ ಸಮೇತ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಅಂಗಡಿ ಮಾಲೀಕ, ಹೆಗಡೆ-ರಟ್ಟೆಕಂಬಿಯ ಭಾಸ್ಕರ ರಾಮ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share