ಬೆಟ್ಟದಪುರ: ವಿದ್ಯುತ್ ಸರಬರಾಜು ನಿರಂತರವಾಗಿ ನಡೆಯಲು ಲೈನ್ಮ್ಯಾನ್ಗಳು ಮಹತ್ತರ ಪಾತ್ರವಹಿಸುತ್ತಾರೆ. ಕೆಲವೊಮ್ಮೆ ಜೀವದ ಅಪಾಯವನ್ನೂ ಎದುರಿಸಿ ಸೇವೆ ಸಲ್ಲಿಸುವ ಅವರ ಸಮರ್ಪಣೆ ಎಲ್ಲರಿಗೂ ಮಾದರಿಯಾಗಿದೆ ಎಂದು ಸೆಸ್ಕ್ ಉಪ ವಿಭಾಗದ ಎಇಇ ಪ್ರಶಾಂತ್ ಕುಮಾರ್ ಹೇಳಿದರು.
ಗ್ರಾಮದ ಸೆಸ್ಕ್ ಉಪ ವಿಭಾಗ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೈನ್ಮ್ಯಾನ್ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯುತ್ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಲೈನ್ಮ್ಯಾನ್ಗಳ ಪರಿಶ್ರಮ ಅಪಾರವಾಗಿದ್ದು, ಮಳೆ, ಗಾಳಿ, ಬಿಸಿಲು ಎನ್ನದೆ ಜನರಿಗೆ ವಿದ್ಯುತ್ ಪೂರೈಕೆ ಆಗುವಂತೆ ಶ್ರಮಿಸುತ್ತಿರುವ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೈನ್ಮ್ಯಾನ್ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸಿಬ್ಬಂದಿ ಪರಸ್ಪರ ಸಿಹಿ ಹಂಚಿಕೊಂಡು ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ನವೀನ್, ಮಹೇಶ್, ಗಣೇಶ್, ಭಾಗಣ್ಣ, ಶಿವಕುಮಾರ್, ಮಂಜು ಹಾಗೂ ದರ್ಶನ್ ಉಪಸ್ಥಿತರಿದ್ದರು.
ವರದಿ: ಪ್ರಸನ್ನಕುಮಾರ್ ಬಿ.ಎಸ್.