Friday, July 24, 2026
Join WhatsApp Group
HomeLocal Newsಮಾಗೋಡಿನಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್‌ ಪಂದ್ಯಾವಳಿ ಯಶಸ್ವಿ

ಮಾಗೋಡಿನಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್‌ ಪಂದ್ಯಾವಳಿ ಯಶಸ್ವಿ

ಯಲ್ಲಾಪುರ: ಯಲ್ಲಾಪುರ: ತಾಲೂಕಿನ ಮಾಗೋಡು ಪೊಲೀಸ್ ಮೈದಾನದಲ್ಲಿ ಮಾಗೋಡ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 28 ಮತ್ತು 29ರಂದು ಯಶಸ್ವಿಯಾಗಿ ನಡೆಯಿತು.

ಪಂದ್ಯಾವಳಿಯಲ್ಲಿ ಒಟ್ಟು 16 ಆಹ್ವಾನಿತ ತಂಡಗಳು ಭಾಗವಹಿಸಿದ್ದು, ರೋಚಕ ಅಂತಿಮ ಪಂದ್ಯದಲ್ಲಿ MCC11 ತಂಡ ಫೈಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಫೈಟರ್ಸ್ ತಂಡ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಯುಕೆ ನೇಚರ್ ಸ್ಟೇ ಮಾಲಕ ನಿರಂಜನ ಭಟ್ಟ ಸೇರಿದಂತೆ ಆರ್‌.ಎಸ್. ಭಟ್ಟ (ದೇಸಾಯಿಮನೆ), ಎಂ.ಎನ್. ಭಟ್ಟ (ನಂದೊಳ್ಳಿ), ನಾಗರಾಜ ಕವಡಿಕೆರೆ, ಶ್ರೀಧರ ಹೆಗಡೆ (ಹೆಗ್ಗುಂಬಳಿ), ಎನ್.ಟಿ. ಹೆಗಡೆ, ದತ್ತಾತ್ರೇಯ ಹೆಗಡೆ, ನರಸಿಂಹ ಭಟ್ಟ (ಕರಡಿಪಾಲ), ಗಣಪತಿ ಪಟಗಾರ, ಚಂದ್ರಶೇಖರ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್‌ ಭಟ್ಟ ಮಾಗೋಡ ಕಾರ್ಯಕ್ರಮ ನಿರ್ವಹಿಸಿದರು.

ಟೂರ್ನಿಯಲ್ಲಿ ಫೈಟರ್ಸ್ ತಂಡದ ಅಮಿತ್ ಗುಣಗಿ “ಮ್ಯಾನ್ ಆಫ್ ದಿ ಸಿರೀಸ್” ಪ್ರಶಸ್ತಿ ಪಡೆದರೆ, ಅಂತಿಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ MCC11 ತಂಡದ ಶಿವು ಭಟ್ “ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿ ಪಡೆದರು. ಅದೇ ತಂಡದ ನಾಗರಾಜ್ “ಬೆಸ್ಟ್ ಬ್ಯಾಟ್ಸ್‌ಮನ್” ಪ್ರಶಸ್ತಿ ಪಡೆದರೆ, ವೆಂಕಿ ನಂದೊಳ್ಳಿ “ಬೆಸ್ಟ್ ಫೀಲ್ಡರ್” ಪ್ರಶಸ್ತಿಗೆ ಭಾಜನರಾದರು.

ಒಟ್ಟಾರೆ, ಎರಡು ದಿನಗಳ ಕಾಲ ನಡೆದ ಪಂದ್ಯಾವಳಿ ಕ್ರೀಡಾಭಿಮಾನಿಗಳಿಗೆ ರೋಚಕ ಅನುಭವ ನೀಡಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share