ಯಲ್ಲಾಪುರ: ಹಬ್ಬದ ಸಂಭ್ರಮ ಶುರುವಾಗುತ್ತಿದ್ದಂತೆ ಮನೆಮಂದಿಗೆ ಹೊಸ ಬಟ್ಟೆ ಖರೀದಿಸುವ ತಯಾರಿಯೂ ಜೋರಾಗುತ್ತದೆ. ಮಕ್ಕಳಿಗೆ ಹೊಸ ಡ್ರೆಸ್, ಮಹಿಳೆಯರಿಗೆ ಸೀರೆ, ಪುರುಷರಿಗೆ ಹಬ್ಬಕ್ಕೆ ಒಪ್ಪುವ ಉಡುಪು… ಹೀಗೆ ಮನೆಯ ಪ್ರತಿಯೊಬ್ಬರ ಆಯ್ಕೆಯೂ ಬೇರೆ ಬೇರೆ. ಇಂಥ ಹಬ್ಬದ ಖರೀದಿಗೆ ಒಂದೇ ಕಡೆ ಹಲವು ಆಯ್ಕೆಗಳು ಸಿಕ್ಕರೆ ಎಷ್ಟು ಅನುಕೂಲವಲ್ಲವೇ? ಯಲ್ಲಾಪುರದ ʻಮಹಾಲಕ್ಷ್ಮೀ ಸಿಲ್ಕ್ಸ್ & ಸಾರೀಸ್ʼ ಇದೀಗ ಗ್ರಾಹಕರಿಗೆ ಅಂಥದ್ದೊಂದು ಅವಕಾಶ ಕಲ್ಪಿಸಿದೆ.
ಪಟ್ಟಣದಲ್ಲಿ ವಿವಿಧ ಉದ್ಯಮಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿರುವ MKB ಗ್ರೂಪ್ಸ್‌ನ ʻಮಹಾಲಕ್ಷ್ಮೀ ಸಿಲ್ಕ್ಸ್ & ಸಾರೀಸ್ʼ ಕಳೆದ ನಾಲ್ಕು ವರ್ಷಗಳಿಂದ ಯಲ್ಲಾಪುರ ಪಟ್ಟಣದ ಜೊತೆಗೆ ಗ್ರಾಮೀಣ ಭಾಗದ ಗ್ರಾಹಕರಿಗೂ ಜವಳಿ ಮತ್ತು ವಸ್ತ್ರಗಳ ಅಗತ್ಯತೆಯನ್ನು ಪೂರೈಸುತ್ತಿದೆ. ಇದೀಗ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 11ರಿಂದ ವಿಶೇಷ ಡಿಸ್ಕೌಂಟ್ ಸೇಲ್ ಆರಂಭಿಸಿದ್ದು, ನವೆಂಬರ್ 10ರವರೆಗೂ ಈ ಕೊಡುಗೆ ಲಭ್ಯವಿರಲಿದೆ.
ಪುರುಷರು, ಮಹಿಳೆಯರು ಹಾಗೂ ಮಕ್ಕಳ ವಸ್ತ್ರಗಳ ಖರೀದಿಗೆ ಶೇ.20ರಿಂದ ಶೇ.50ರವರೆಗೆ ರಿಯಾಯಿತಿ ಘೋಷಿಸಲಾಗಿದೆ. ವಿಶೇಷವೆಂದರೆ, ಆಯ್ದ ಹೊಸ ಸ್ಟಾಕ್‌ಗಳ ಖರೀದಿಗೆ ಆಕರ್ಷಕ ಉಡುಗೊರೆಗಳನ್ನೂ ಘೋಷಿಸಿದೆ. ಹಬ್ಬಕ್ಕೆ ಹೊಸ ವಿನ್ಯಾಸದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇದು ಗಮನ ಸೆಳೆಯುವ ಅವಕಾಶ.
ಖರೀದಿಯ ಮೊತ್ತಕ್ಕೆ ಅನುಗುಣವಾಗಿ ಉಚಿತ ಉಡುಗೊರೆಗಳನ್ನೂ ನೀಡಲಾಗುತ್ತಿದ್ದು, ಕುಟುಂಬದ ಎಲ್ಲರಿಗೂ ಹಬ್ಬದ ಉಡುಪುಗಳನ್ನು ಆಯ್ಕೆ ಮಾಡುವಾಗ ರಿಯಾಯಿತಿಯ ಲಾಭ ಪಡೆಯಬಹುದು.
ಹಬ್ಬಕ್ಕೆ ಬಟ್ಟೆ ಖರೀದಿಸುವಾಗ ವಿನ್ಯಾಸ, ಬಣ್ಣ, ಗುಣಮಟ್ಟ ಮತ್ತು ಬೆಲೆ ಎಲ್ಲವನ್ನೂ ಗಮನಿಸುವುದು ಸಹಜ. ಅದರಲ್ಲೂ ಇಡೀ ಕುಟುಂಬಕ್ಕೆ ಬಟ್ಟೆ ಖರೀದಿಸುವಾಗ ಬಜೆಟ್ ಮುಖ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ವಿವಿಧ ಆಯ್ಕೆಗಳನ್ನು ನೋಡಲು ಅವಕಾಶ ಸಿಗುವುದು ಗ್ರಾಹಕರಿಗೆ ಅನುಕೂಲಕರ.
ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು, ವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ ವಸ್ತ್ರಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಮಹಿಳೆಯರ ಮನ ಸೆಳೆವ ನವನವೀನ ಮಾದರಿಯ ಸಿದ್ಧ ಉಡುಪುಗಳು, ಮಹಿಳೆಯರ ಸಾಂಪ್ರದಾಯಿಕ/ ಹೊಸ ಟ್ರೆಂಡ್‌ನ ಸೀರೆಗಳೂ ಸೇರಿದಂತೆ ಎಲ್ಲ ವಿಧದ ಸಿದ್ಧ ಉಡುಪುಗಳಂತೂ ಒಂದಕ್ಕಿಂತ ಒಂದು ಆಕರ್ಷಿಸುವಂತಿವೆ.
ಹೀಗಾಗಿ, ದಸರಾ–ದೀಪಾವಳಿ ಖರೀದಿಯ ಯೋಜನೆಯಲ್ಲಿರುವವರು ʻಮಹಾಲಕ್ಷ್ಮೀ ಸಿಲ್ಕ್ಸ್ & ಸಾರೀಸ್ʼಗೆ ಭೇಟಿ ನೀಡಿ ಲಭ್ಯವಿರುವ ವಸ್ತ್ರ ಸಂಗ್ರಹ ಮತ್ತು ಕೊಡುಗೆಗಳ ವಿವರ ತಿಳಿದುಕೊಳ್ಳಬಹುದು. ಮನಕ್ಕೊಪ್ಪುವ ಬಟ್ಟೆ ಖರೀದಿಸಲು ಇದು ಸಕಾಲ! ಬನ್ನಿ, ನಿಮಗೊಪ್ಪುವ ಉಡುಪು ಖರೀದಿಸಿ, ಹಬ್ಬದ ಸಂಭ್ರಮ ಇಮ್ಮಡಿಯಾಗಲಿ!
_ಪ್ರಾಯೋಜಿತ ಲೇಖನ_


