ಭಟ್ಕಳ: ಗೂಡಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಮಾವಿನಕಟ್ಟೆಯ ವ್ಯಾಪಾರಿ ಗಣಪತಿ ಬಾಬು ನಾಯ್ಕ (45) ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.12ರಂದು ಸಂಜೆ 7.20ರ ವೇಳೆಗೆ ಭಟ್ಕಳ ತಾಲೂಕಿನ ಮಾವಿನಕಟ್ಟೆಯಲ್ಲಿರುವ ಗೂಡಂಗಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಹಣಮಂತ ಬಿರಾದಾರ ಅವರು ನೀಡಿದ ದೂರಿನ ಪ್ರಕಾರ, ದಾಳಿಯ ವೇಳೆ 90 ಎಂ.ಎಲ್. ಅಳತೆಯ 25 ತುಂಬಿದ ಮದ್ಯದ ಪ್ಯಾಕೆಟ್ಗಳು, ಎರಡು ಖಾಲಿ ಪ್ಯಾಕೆಟ್ಗಳು, ಎರಡು ಪ್ಲಾಸ್ಟಿಕ್ ನೀರಿನ ಲೋಟಗಳು ಹಾಗೂ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಪತ್ತೆಯಾಗಿವೆ.
ವಶಪಡಿಸಿಕೊಂಡ ಮದ್ಯದ ಪ್ಯಾಕೆಟ್ಗಳ ಒಟ್ಟು ಮೌಲ್ಯ ರೂ.1,375 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಗಣಪತಿ ಬಾಬು ನಾಯ್ಕ ವಿರುದ್ಧ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


