Saturday, May 30, 2026
HomeLocal Newsವ್ಯಕ್ತಿ ನಾಪತ್ತೆ; ಪತ್ತೆಗೆ ಮನವಿ

ವ್ಯಕ್ತಿ ನಾಪತ್ತೆ; ಪತ್ತೆಗೆ ಮನವಿ

ಕಾರವಾರ: ಕದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕದ್ರಾ ಆರ್‌.ಎಚ್‌. ಸೆಂಟರ್ ನಿವಾಸಿ ನಂದಾ ದತ್ತಾ ಗೌಳಿ (64) ಎಂಬವರು ಮನೆಯಿಂದ ಹೊರಟವರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಮೇ 10ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆಯಿಂದ ಹೊರಟಿದ್ದ ಅವರು ಬಳಿಕ ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ: ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲುಮುಖ ಹೊಂದಿದ್ದು, ಸುಮಾರು 5.6 ಅಡಿ ಎತ್ತರ ಇದ್ದಾರೆ. ಶರ್ಟ್ ಹಾಗೂ ಹಾಫ್ ಪ್ಯಾಂಟ್ ಧರಿಸಿರುತ್ತಾರೆ. ಕೊಂಕಣಿ ಹಾಗೂ ಕನ್ನಡ ಭಾಷೆಯನ್ನು ತಡವರಿಸಿ ಮಾತನಾಡುತ್ತಾರೆ.

ಸಾರ್ವಜನಿಕರಿಗೆ ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಕದ್ರಾ ಪೊಲೀಸ್ ಠಾಣೆ (08382-256592), ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಕದ್ರಾ (08382-256200), ಪೊಲೀಸ್ ಉಪಾಧೀಕ್ಷಕರ ಕಚೇರಿ ಕಾರವಾರ (08382-226416) ಅಥವಾ ಕಾರವಾರ ಕಂಟ್ರೋಲ್ ರೂಂ (08382-226233) ಸಂಪರ್ಕಿಸುವಂತೆ ಕದ್ರಾ ಪೊಲೀಸ್ ಠಾಣೆಯ ಸಹಾಯಕ ಉಪ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share