Thursday, July 23, 2026
Join WhatsApp Group
HomeTechಕಾರಿನ ವೈರ್ ಕಡಿಯುವ ಇಲಿಗಳ ಕಾಟಕ್ಕೆ ಬ್ರೇಕ್ ಹಾಕಿ!

ಕಾರಿನ ವೈರ್ ಕಡಿಯುವ ಇಲಿಗಳ ಕಾಟಕ್ಕೆ ಬ್ರೇಕ್ ಹಾಕಿ!

ಮಲೆನಾಡಿನ ಜನರಿಗೆ ಮಳೆ ಹೊಸದೇನಲ್ಲ. ಆದರೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮನೆ, ಅಂಗಳ, ತೋಟ ಅಷ್ಟೇ ಅಲ್ಲ, ವಾಹನಗಳಿಗೂ ಹೊಸ ಸಮಸ್ಯೆಗಳು ಶುರುವಾಗುತ್ತವೆ. ಅದರಲ್ಲೂ ಉತ್ತರ ಕನ್ನಡದಂತಹ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಕಾರು ಹಾಗೂ ಬೈಕ್‌ ಮಾಲೀಕರಿಗೆ “ಇಲಿಗಳ ಕಾಟ” ದೊಡ್ಡ ತಲೆನೋವಾಗುತ್ತಿದೆ.

ರಾತ್ರಿ ಮನೆ ಮುಂದೆ ಅಥವಾ ಗ್ಯಾರೇಜ್‌ನಲ್ಲಿ ನಿಲ್ಲಿಸಿದ ಕಾರು ಬೆಳಗ್ಗೆ ಸ್ಟಾರ್ಟ್ ಆಗದೇ ಇರುವ ಘಟನೆಗಳು ಈಗ ಸಾಮಾನ್ಯವಾಗುತ್ತಿವೆ. ಮೆಕಾನಿಕ್ ಬಳಿ ತೆಗೆದುಕೊಂಡು ಹೋದಾಗಲೇ ಗೊತ್ತಾಗುವುದು, “ಇಲಿ ವೈರ್ ಕಚ್ಚಿದೆ ಸಾರ್!”

ಕೆಲವೊಮ್ಮೆ ಸಣ್ಣ ವೈರ್ ಹಾನಿಯಿಂದ ಪಾರಾಗಬಹುದು. ಆದರೆ ಅನೇಕ ಬಾರಿ ಸೆನ್ಸರ್ ವೈರ್‌, ಎಸಿ ವೈರಿಂಗ್‌, ಇಂಜಿನ್ ವೈರಿಂಗ್‌, ಫ್ಯೂಸ್ ಬಾಕ್ಸ್ ಭಾಗಗಳಿಗೂ ಹಾನಿಯಾಗುತ್ತದೆ. ಪರಿಣಾಮ, ಸಾವಿರಗಳಿಂದ ಲಕ್ಷದವರೆಗಿನ ಖರ್ಚು ವಾಹನ ಮಾಲೀಕರ ಮೆಲೆ ಬೀಳುತ್ತದೆ.

ಮಳೆಗಾಲದಲ್ಲಿ ತೇವಾಂಶ ಮತ್ತು ಚಳಿಯಿಂದ ತಪ್ಪಿಸಿಕೊಳ್ಳಲು ಇಲಿಗಳು ಬಿಸಿ ಇರುವ ಸ್ಥಳ ಹುಡುಕುತ್ತವೆ. ಕಾರಿನ ಇಂಜಿನ್ ಭಾಗ ಅದಕ್ಕೆ ಸೂಕ್ತ ಜಾಗ. ವಿಶೇಷವಾಗಿ ರಾತ್ರಿ ಹೊತ್ತು ವಾಹನ ಚಲಾಯಿಸಿ ನಿಲ್ಲಿಸಿದ ಬಳಿಕ ಇಂಜಿನ್ ಭಾಗದಲ್ಲಿ ಉಷ್ಣತೆ ಉಳಿದಿರುತ್ತದೆ. ಇದರಿಂದ ಇಲಿಗಳು ಕಾರಿನೊಳಗೆ ನುಗ್ಗಿ ಆಶ್ರಯ ಪಡೆಯುತ್ತವೆ.

ಬೈಕ್‌ಗಳಲ್ಲೂ ಇದೇ ಸಮಸ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ಹೆಚ್ಚು ದಿನ ಬಳಸದೇ ನಿಲ್ಲಿಸಿದ ವಾಹನಗಳಿಗೆ ಅಪಾಯ ಜಾಸ್ತಿ.

ಅನೇಕರು ವಾಹನವನ್ನು ವಾರಗಟ್ಟಲೆ ಬಳಸದೇ ನಿಲ್ಲಿಸುತ್ತಾರೆ. ಕೆಲವರು ಕಾರಿನೊಳಗೆ ಆಹಾರದ ಕವರ್‌, ಚಿಪ್ಸ್ ಪುಡಿ, ಹಣ್ಣುಗಳ ಅವಶೇಷ ಬಿಡುತ್ತಾರೆ. ಗ್ಯಾರೇಜ್ ಸುತ್ತ ಕಸ, ಹಳೆಯ ವಸ್ತುಗಳ ರಾಶಿ ಕೂಡ ಇಲಿಗಳಿಗೆ ಆಶ್ರಯವಾಗುತ್ತದೆ. ಕತ್ತಲೆಯಲ್ಲಿ, ಸರಿಯಾಗಿ ಗಾಳಿ ಆಡದ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ತಜ್ಞರು ಮತ್ತು ಮೆಕಾನಿಕ್‌ಗಳು ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಾರೆ:

* ವಾರಕ್ಕೆ ಕನಿಷ್ಠ ಎರಡು ಬಾರಿ ವಾಹನ ಸ್ಟಾರ್ಟ್ ಮಾಡುವುದು

* ಇಂಜಿನ್ ಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು

* ವಾಹನದ ಒಳಗೆ ಆಹಾರ ಪದಾರ್ಥ ಬಿಡದೇ ಇರುವುದು

* ಗ್ಯಾರೇಜ್ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು

* ಕೆಲವೊಮ್ಮೆ ಬಾನೆಟ್ ಸ್ವಲ್ಪ ತೆರೆದಿಡುವುದು

* ಕರ್ಪೂರ, ಪುದೀನಾ ಎಣ್ಣೆ ಮುಂತಾದ ವಾಸನೆ ಬಳಕೆ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾರುಗಳಿಗಾಗಿ ವಿಶೇಷವಾಗಿ ಬಳಸುವ Rat Repellent Spray ಹಾಗೂ ultrasonic repellent devices ಕೂಡ ಲಭ್ಯವಿವೆ. ಇವು ಇಲಿಗಳು ವಾಹನದೊಳಗೆ ನುಗ್ಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಹಲವರು ಬಳಸುತ್ತಿದ್ದಾರೆ.

ನೀವು Amazon ಖಾತೆ ಹೊಂದಿದ್ದರೆ 👉 https://amzn.to/3PXcifD ಈ ಲಿಂಕ್ ಮೂಲಕ ಇಂತಹ ಇಲಿ ನಿರೋಧಕ ಸ್ಪ್ರೆಗಳನ್ನು ಸುಲಭವಾಗಿ ನಿಮ್ಮ ಮನೆಗೇ ತರಿಸಿಕೊಳ್ಳಬಹುದು. ಈ ಉತ್ಪನ್ನ ಒಳ್ಳೆಯ ರೇಟಿಂಗ್ ಹಾಗೂ ಉತ್ತಮ ರಿವ್ಯೂ ಪಡೆದಿದೆ.

ಅನೇಕ ವಾಹನ ಮಾಲೀಕರು ಸಮಸ್ಯೆ ಎದುರಾದ ಬಳಿಕವೇ ಎಚ್ಚೆತ್ತುಕೊಳ್ಳುತ್ತಾರೆ. ಆದರೆ ಮಳೆಗಾಲದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾವಿರಾರು ರೂಪಾಯಿ ರಿಪೇರಿ ವೆಚ್ಚದಿಂದ ತಪ್ಪಿಸಿಕೊಳ್ಳಬಹುದು.

ಹೀಗಾಗಿ ನೆನಪಿಡಿ, ಮಳೆಗಾಲದಲ್ಲಿ ಕೇವಲ ರಸ್ತೆಯಲ್ಲಿ ಮಾತ್ರವಲ್ಲದೆ, ಮನೆಯ ಗ್ಯಾರೇಜ್‌ನಲ್ಲಿ, ಅಂಗಳದಲ್ಲಿ ನಿಲ್ಲಿಸಿರುವ ನಿಮ್ಮ ವಾಹನಕ್ಕೂ ರಕ್ಷಣೆ ಬೇಕು ಎಂಬುದನ್ನು ಮರೆಯಬೇಡಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share