Friday, October 23, 2026
HomeLocal Newsಜಮೀನಿನ ಬಲೆಗೆ ಸಿಲುಕಿದ್ದ ಮಂಗನ ಮರಿ ರಕ್ಷಣೆ

ಜಮೀನಿನ ಬಲೆಗೆ ಸಿಲುಕಿದ್ದ ಮಂಗನ ಮರಿ ರಕ್ಷಣೆ

ಮುಂಡಗೋಡ: ಜಮೀನಿನ ರಕ್ಷಣೆಗಾಗಿ ಅಳವಡಿಸಿದ್ದ ಮೆಷ್‌ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮಂಗನ ಮರಿಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ ತಾಯಿ ಮಂಗನ ಮಡಿಲಿಗೆ ಸೇರಿಸಿದ ಘಟನೆ ತಾಲೂಕಿನ ಕಾತೂರು ವಲಯದ ಮರಗಡಿ ಗ್ರಾಮದಲ್ಲಿ ನಡೆದಿದೆ.

ಗುರುವಾರ ಮುಸ್ಸಂಜೆ ವೇಳೆ ಮರಗಡಿ ಗ್ರಾಮದ ರೈತರೊಬ್ಬರು ಜಮೀನಿಗೆ ಅಳವಡಿಸಿದ್ದ ಮೆಷ್‌ ಬಲೆಯಲ್ಲಿ ಮಂಗನ ಮರಿ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಗ್ರಾಮದ ಅನಿಲ್ ರಾವಳ್ ಅವರು ಅರಣ್ಯ ವೀಕ್ಷಕ ಮನ್ಸೂರ್ ಅಲಿ ಶಾಭಾಳ ಅವರಿಗೆ ಮಾಹಿತಿ ನೀಡಿದರು. ಅವರು ತಕ್ಷಣ ವನ್ಯಜೀವಿ ರಕ್ಷಕ ಹಾಗೂ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ವಿಷಯ ತಿಳಿಸಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಸುನೀಲ್ ಹೊನ್ನಾವರ ಅವರು ಬಲೆಯಲ್ಲಿ ಸಿಲುಕಿದ್ದ ಮಂಗನ ಮರಿಯನ್ನು ಸುರಕ್ಷಿತವಾಗಿ ಬಿಡಿಸಿ, ತಾಯಿ ಮಂಗನ ಬಳಿಗೆ ಸೇರಿಸಿದರು.

ಉರಗ ರಕ್ಷಣೆಯ ಜೊತೆಗೆ ಅಪಾಯಕ್ಕೆ ಸಿಲುಕುವ ಇತರ ವನ್ಯಜೀವಿಗಳ ರಕ್ಷಣೆಯಲ್ಲಿಯೂ ಜವಾಬ್ದಾರಿಯಿಂದ ತೊಡಗಿಸಿಕೊಂಡಿರುವ ಅರಣ್ಯಾಧಿಕಾರಿ ಸುನೀಲ್‌ ಹೊನ್ನಾವರ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕ ಜಗದೀಶ್ ಗೌಡ್ರು, ಮನ್ಸೂರ್ ಮರಗಡಿ ಹಾಗೂ ಗ್ರಾಮಸ್ಥರಾದ ವಸಿಮ್ ಸಾಬಾಳ್, ನುಮಾನ್ ಗಾಂಜಿ ಮತ್ತು ಅನಿಲ್ ರಾವಳ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share