Friday, October 23, 2026
HomeLocal Newsಮನೆಯ ಹಂಚಿನಡಿ ನಾಗರಹಾವು: ಅರಣ್ಯ ಸಿಬ್ಬಂದಿಯಿಂದ ರಕ್ಷಣೆ

ಮನೆಯ ಹಂಚಿನಡಿ ನಾಗರಹಾವು: ಅರಣ್ಯ ಸಿಬ್ಬಂದಿಯಿಂದ ರಕ್ಷಣೆ

ಮುಂಡಗೋಡ: ಮನೆಯ ಮೇಲ್ಛಾವಣಿಯ ಹಂಚಿನ ಕೆಳಗೆ ನಾಗರಹಾವು ಕಾಣಿಸಿಕೊಂಡು ಆತಂಕಗೊಂಡಿದ್ದ ಕುಟುಂಬಕ್ಕೆ ಅರಣ್ಯ ಸಿಬ್ಬಂದಿ ನೆರವಾಗಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಶ್ರೀಕಾಂತ ತುಂಬರಿಕೊಪ್ಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆಯ ಮೇಲ್ಛಾವಣಿಯ ಹಂಚಿನ ಕೆಳಗೆ ನಾಗರಹಾವು ಇರುವುದನ್ನು ಗಮನಿಸಿದ ಕುಟುಂಬಸ್ಥರು ಸಹಜವಾಗಿ ಆತಂಕಗೊಂಡಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗಸ್ತು ಅರಣ್ಯಪಾಲಕ ಮುತ್ತುರಾಜ ಹಳ್ಳಿ ಅವರು, ಎಚ್ಚರಿಕೆಯಿಂದ ಮೇಲ್ಛಾವಣಿಯನ್ನೇರಿ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದರು. ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದರು.

ಅಪಾಯಕಾರಿ ಪರಿಸ್ಥಿತಿಯಲ್ಲೂ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ನಾಗರಹಾವನ್ನು ರಕ್ಷಿಸಿದ ಮುತ್ತುರಾಜ ಹಳ್ಳಿ ಅವರ ಕಾರ್ಯಕ್ಕೆ ಮನೆಯವರು ಕೃತಜ್ಞತೆ ಸಲ್ಲಿಸಿದರು.

ಅರಣ್ಯ ಇಲಾಖೆಯ ಸಿಬ್ಬಂದಿ ಎಂದರೆ ತಿಂಗಳಾಂತ್ಯಕ್ಕೆ ಸಂಬಳ ಪಡೆಯುವ ಸರ್ಕಾರಿ ನೌಕರರಷ್ಟೇ ಅಲ್ಲ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಮೂಕಪ್ರಾಣಿಗಳ ರಕ್ಷಣೆಯಲ್ಲೂ ಕಾಳಜಿಯಿಂದ ತೊಡಗಿಸಿಕೊಳ್ಳುವವರು ಎಂಬುದಕ್ಕೆ ಮುತ್ತುರಾಜ ಹಳ್ಳಿ ಅವರ ಕಾರ್ಯ ಸಾಕ್ಷಿಯಾಗಿದೆ.

ಕಾಡಿನ ಪ್ರಾಣಿಗಳಷ್ಟೇ ಅಲ್ಲದೆ, ನಾಡಿನಲ್ಲಿ ಅಪಾಯಕ್ಕೆ ಸಿಲುಕುವ ಜೀವಿಗಳ ರಕ್ಷಣೆಯಲ್ಲೂ ಅರಣ್ಯ ಸಿಬ್ಬಂದಿ ಮಾನವೀಯ ಕಾಳಜಿ ತೋರುತ್ತಾರೆ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share