ಶುರುವಾಗಿದೆ ಕಾರ್ಪೊರೇಟ್ ಜಿಹಾದ್!:ನಾಸಿಕ್ ಐಟಿ-ಬಿಪಿಒ ಕಚೇರಿಯಲ್ಲಿ ಕಿರುಕುಳ ಆರೋಪ: 7 ಮಂದಿ ಬಂಧನ
ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಗರದ ಸಾತ್ಪುರ ಪ್ರದೇಶದಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಯ ಬಿಪಿಒ ವಿಭಾಗದಲ್ಲಿ ಉದ್ಯೋಗ, ಸಂಬಳ ಹೆಚ್ಚಳ ಮತ್ತು ಬಡ್ತಿಯ ಆಮಿಷವೊಡ್ಡಿ ಯುವತಿಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಇತರೆ ಗಂಭೀರ ಆರೋಪಗಳು ಕೇಳಿಬಂದಿವೆ.
ವರದಿಗಳ ಪ್ರಕಾರ, ಕೆಲವು ನಿರ್ವಾಹಕರು ಉದ್ಯೋಗ ಭದ್ರತೆ ಮತ್ತು ವೇತನ ಹೆಚ್ಚಳದ ಹೆಸರಿನಲ್ಲಿ ಹಿಂದೂ ಯುವತಿಯರ ಮೇಲೆ ಒತ್ತಡ ಹೇರುವುದರ ಜೊತೆಗೆ, ಅವರ ಮೇಲೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪಗಳು ವ್ಯಕ್ತವಾಗಿವೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಮಹಿಳಾ ಎಚ್ಆರ್ ಮ್ಯಾನೇಜರ್ ಕೂಡ ಸೇರಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಇದನ್ನು “ಕಾರ್ಪೋರೇಟ್ ಜಿಹಾದ್” ಎಂದು ಕರೆಯುವ ಮೂಲಕ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
2022ರಿಂದ 2026ರವರೆಗೆ ಈ ರೀತಿಯ ಕೃತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿದ್ದು, ಮಾರ್ಚ್ 25ರಂದು ಯುವತಿಯೊಬ್ಬಳು ಮೊದಲ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸರ ಮನವಿಗೆ ಸ್ಪಂದಿಸಿ ಇನ್ನೂ 7 ಯುವತಿಯರು ಮುಂದೆ ಬಂದು ದೂರು ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಎಫ್ಐಆರ್ಗಳು ದಾಖಲಾಗಿವೆ. ಪ್ರಮುಖ ಆರೋಪಿಗಳಾಗಿ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾಹ್ರುಖ್ ಖುರೇಶಿ, ರಜಾ ಮೆಮನ್, ತೌಸೀಫ್ ಅಟ್ಟಾರ್, ದಾನಿಶ್ ಶೇಖ್ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಹೆಚ್ಚಿನ ವಿವರಗಳು ತನಿಖೆಯ ನಂತರ ಹೊರಬರುವ ನಿರೀಕ್ಷೆಯಿದೆ.