Friday, July 24, 2026
Join WhatsApp Group
HomeCrimeಹಸೆಮಣೆ ಏರಲಿದ್ದ ವೈದ್ಯ ಮಸಣಕ್ಕೆ; ಕೊ*ಲೆ ಶಂಕೆ

ಹಸೆಮಣೆ ಏರಲಿದ್ದ ವೈದ್ಯ ಮಸಣಕ್ಕೆ; ಕೊ*ಲೆ ಶಂಕೆ

ಶಿರಸಿ: ನಗರದ ಕೆಎಚ್‌ಬಿ ಕಾಲೋನಿ ಹೊಸ ಬಡಾವಣೆಯಲ್ಲಿ ವೈದ್ಯನೊಬ್ಬನ ಹತ್ಯೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ರಮೇಶ ಎಫ್. ಕಲ್ಗುಟ್ಕರ್ ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಸಂಬಂಧಿಕರು ಮನೆಗೆ ಬಂದಾಗ ರಮೇಶ ಕಲ್ಗುಟ್ಕರ್ ಅವರು ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದು, ಈಗ ಅವರು ಮತ್ತೊಂದು ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ನಾಳೆ (ಸೋಮವಾರ) ತಾಲೂಕಿನ ಮಂಜುಗುಣಿಯಲ್ಲಿ ವಿವಾಹ ನಡೆಯಬೇಕಾಗಿತ್ತು ಎನ್ನಲಾಗಿದೆ.

ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ DYSP Geetha Patil ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share