Ad
Ad
Ad
Home Crime ಶಿರಸಿ | ಗಬ್ಬದ ಆಕಳು ಕಳವು: ಸಿಸಿಟಿವಿಯಲ್ಲಿ ಶಂಕಿತರ ಚಲನವಲನ!

ಶಿರಸಿ | ಗಬ್ಬದ ಆಕಳು ಕಳವು: ಸಿಸಿಟಿವಿಯಲ್ಲಿ ಶಂಕಿತರ ಚಲನವಲನ!

0
3

ಶಿರಸಿ: ತಾಲೂಕಿನ ಮೇಲಿನ ಎಸಳೆಯ ಅನಿಲ್‌ ರಾಮಚಂದ್ರ ದೇವಾಡಿಗ ಅವರಿಗೆ ಸೇರಿದ್ದ ಗಬ್ಬದ ಆಕಳೊಂದು ನಾಪತ್ತೆಯಾಗಿದ್ದು, ಇಬ್ಬರು ವ್ಯಕ್ತಿಗಳು ಆಕಳನ್ನು ಬೆನ್ನಟ್ಟಿ ಹಿಡಿದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Ad

ಈ ಬಗ್ಗೆ ತಾಲೂಕಿನ ಮೇಲಿನ ಎಸಳೆ ನಿವಾಸಿ, ಡ್ರೈವರ್‌ ಹಾಗೂ ಕೃಷಿ ವೃತ್ತಿಯ ಅನಿಲ್‌ ರಾಮಚಂದ್ರ ದೇವಾಡಿಗ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಆಗಸ್ಟ್ 13ರಂದು ಬೆಳಿಗ್ಗೆ ತಮ್ಮ ಮನೆಯ ಬಳಿ ಎರಡು ಆಕಳುಗಳನ್ನು ಮೇಯಲು ಬಿಟ್ಟಿದ್ದರು. ಈ ಪೈಕಿ ಸುಮಾರು 15 ಸಾವಿರ ರೂ. ಮೌಲ್ಯದ, ನಾಲ್ಕು ವರ್ಷದ ಕಪ್ಪು ಬಣ್ಣದ, ಹಣೆಯ ಮೇಲೆ ಬಿಳಿ ಚುಕ್ಕೆಯಿದ್ದ ಕಂಟ್ರಿ ಜರ್ಸಿ ಆಕಳು ಸಂಜೆ 6 ಗಂಟೆಯಾದರೂ ಮನೆಗೆ ಮರಳಿರಲಿಲ್ಲ.

ನಂತರ ಹಲವು ದಿನಗಳಿಂದ ಆಕಳಿಗಾಗಿ ಹುಡುಕಾಟ ನಡೆಸುತ್ತಿದ್ದ ಅವರು, ಸೆಪ್ಟೆಂಬರ್ 11ರಂದು ಕಸ್ತೂರಬಾ ನಗರದ ಬಾಬು ನಂದಿ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳು ಆಕಳನ್ನು ಬೆನ್ನಟ್ಟಿ ಹಿಡಿದುಕೊಂಡು ಹೋಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಕಳನ್ನು ಪತ್ತೆಹಚ್ಚಿ, ಕಳವು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!