ಶಿರಸಿ: ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಓಡಿಸಿದ ಕೆಎಚ್ಬಿ ಕಾಲೋನಿಯ ತೇಜಸ್ ಲಕ್ಷ್ಮೀಕಾಂತ ನಾಯ್ಕ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ಗೂ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ನಗರದ ವೀರಭದ್ರಗಲ್ಲಿ ದೇವಸ್ಥಾನ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಗಾಂಧಿನಗರ ನಿವಾಸಿ ರಾಜೇಶ ಕೃಷ್ಣಾಕರ ಶೇಟ್ (48) ಗಾಯಗೊಂಡ ಸ್ಕೂಟರ್ ಸವಾರ. ಬೈಕ್ನ ಹಿಂಬದಿ ಸವಾರ ದರ್ಶನ ಮಹದೇವ ತರಕನಳ್ಳಿ (26) ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜೇಶ ಶೇಟ್ ಅವರು ಅ.22ರಂದು ರಾತ್ರಿ ರಾಮನಬೈಲ್ನ ಸಾಯಿ ಮಂದಿರಕ್ಕೆ ತೆರಳಿ, ಅಲ್ಲಿಂದ ತಮ್ಮ ಸ್ಕೂಟರ್ನಲ್ಲಿ ಸಿಂಪಿಗಲ್ಲಿಯಲ್ಲಿರುವ ಅಂಗಡಿಗೆ ಹೋಗುತ್ತಿದ್ದರು. ರಾತ್ರಿ ಸುಮಾರು 7.50ರ ವೇಳೆಗೆ ವೀರಭದ್ರಗಲ್ಲಿ ದೇವಸ್ಥಾನ ರಸ್ತೆಯಲ್ಲಿ ಬರುತ್ತಿದ್ದಾಗ, ಶಿರಸಿ ಅರ್ಬನ್ ಬ್ಯಾಂಕ್ ಕಡೆಯಿಂದ ಬಂದ ನೋಂದಣಿ ಸಂಖ್ಯೆ ಇಲ್ಲದ ಹೀರೋ ಎಕ್ಸ್ಪ್ಲಸ್ ಬೈಕ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬೈಕ್ ಸವಾರ ತೇಜಸ್ ಲಕ್ಷ್ಮೀಕಾಂತ ನಾಯ್ಕ (26) ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಪಡಿಸಿದ್ದಾನೆ ಎಂದು ಗಾಯಾಳು ರಾಜೇಶ ಅವರ ಸಹೋದರ ಗಣೇಶ ಕೃಷ್ಣಾಕರ ಶೇಟ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ರಾಜೇಶ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಬಲಗಾಲಿನ ಮೊಣಕಾಲಿಗೆ ಗಾಯವಾಗಿದೆ. ಬೈಕ್ನ ಹಿಂಬದಿ ಸವಾರ ದರ್ಶನ ಅವರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ಗೂ ಡಿಕ್ಕಿ ಹೊಡೆದು ಹಾನಿ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಪಘಾತದ ಬಳಿಕ ಬೈಕ್ ನಿಲ್ಲಿಸದೆ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


